ಇಸ್ಲಾಮಾಬಾದ್ (ಪಾಕಿಸ್ತಾನ): ರೂಪಾಂತರಿ ಒಮಿಕ್ರಾನ್ ಸಮುದಾಯ ಪ್ರಸರಣದಿಂದಾಗಿ ನಿತ್ಯ ಸುಮಾರು 3,000-4,000 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಫೆಬ್ರವರಿ 2022ರ ಮಧ್ಯ ಭಾಗದಲ್ಲಿ ಪಾಕಿಸ್ತಾನದಲ್ಲಿ ಕೋವಿಡ್ 5ನೇ ಅಲೆ ಸಂಭವಿಸಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ರಾಷ್ಟ್ರ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಹಲವಾರು ಹೊಸ ಪ್ರಕರಣಗಳು ವರದಿಯಾಗಿರುವುದು ಇದಕ್ಕೆ ಕಾರಣವಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿ (ಡಿಎಚ್‌ಒ) ಡಾ ಝೀಮ್ ಜಿಯಾ ರಾಜಧಾನಿಯಲ್ಲಿ 18 ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ.
ಹೊಸ ಒಮಿಕ್ರಾನ್ ಪ್ರಕರಣಗಳ ಪತ್ತೆಯಾದ ನಂತರ, ಇಸ್ಲಾಮಾಬಾದ್‌ನಲ್ಲಿ ಪ್ರಕರಣಗಳ ಸಂಖ್ಯೆ 66 ರಿಂದ 84ಕ್ಕೆ ಏರಿಕೆಯಾಗಿದೆ. ಸೋಂಕಿತರ ಮಾದರಿಗಳನ್ನು ಇಸ್ಲಾಮಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೆಂಟರ್ಗೆ (ಎನ್‌ಐಹೆಚ್) ಕಳುಹಿಸಲಾಗುತ್ತಿದೆ.
ಒಮಿಕ್ರಾನ್ ರೂಪಾಂತರದ ಪ್ರಸರಣವು ಕರಾಚಿ, ಲಾಹೋರ್ ಮತ್ತು ಇಸ್ಲಾಮಾಬಾದ್‌ನಲ್ಲಿ ಪ್ರಾರಂಭವಾಗಿದೆ. ಮುಂಬರುವ ಎರಡು ವಾರಗಳಲ್ಲಿ ದೇಶಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ. ದೇಶದಲ್ಲಿ ಶನಿವಾರ 594 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ರಾಷ್ಟ್ರೀಯ ಕಮಾಂಡ್ ಮತ್ತು ಆಪರೇಷನ್ ಸೆಂಟರ್ (NCOC) ಭಾನುವಾರ ತಿಳಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ 10 ಮಂದಿಗೆ ವಕ್ಕರಿಸಿದ ಒಮಿಕ್ರಾನ್ .. 76ಕ್ಕೆ ಏರಿದ ಸೋಂಕಿತರ ಸಂಖ್ಯೆತಿಳಿಸಿದೆ.