ರೋಮ್: ಇಟಲಿಯಲ್ಲಿ ಇಂದು ಒಂದೇ ದಿನ 919 ಮಂದಿ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದು, ದೇಶದಲ್ಲಿ ಮೃತರ ಸಂಖ್ಯೆ 9,134ಕ್ಕೆ ಏರಿಕೆಯಾಗಿದೆ.
ಇಟಲಿ ನಂತರದ ಸ್ಥಾನದಲ್ಲಿ ಸ್ಪೇನ್ (5,812 ಸಾವು), ಚೀನಾ (3,295 ಸಾವು), ಇರಾನ್ (2,517 ಸಾವು) ಹಾಗೂ ಅಮೆರಿಕ (1722) ರಾಷ್ಟ್ರಗಳು ಇವೆ.

ಒಟ್ಟು ಪ್ರಪಂಚದಾದ್ಯಂತ ಮೃತರ ಸಂಖ್ಯೆ 28,791 ಹಾಗೂ ಸೋಂಕಿತರ ಸಂಖ್ಯೆ 6,21,000 ಕ್ಕೆ ಏರಿದೆ. ಅಮೆರಿಕಾದಲ್ಲೇ 1 ಲಕ್ಷಕ್ಕೂ ಅಧಿಕ ಕೊವಿಡ್-19 ಪ್ರಕರಣಗಳು ವರದಿಯಾಗಿದೆ.