ಬೀಜಿಂಗ್(ಚೀನಾ): ದೇಶದಲ್ಲಿ ದಿನೇ ದಿನೆ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಚೀನಾದ ವಿದ್ಯಾರ್ಥಿಗಳು, ನಾಗರಿಕರು, ಪ್ರವಾಸಿಗಳು ಹಾಗೂ ಉದ್ಯಮಿಗಳನ್ನು ತನ್ನ ದೇಶಕ್ಕೆ ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದೆ. ಕೊರೊನಾ ವೈರಸ್‌ನಿಂದಾಗಿ ತಮ್ಮ ಪ್ರಜೆಗಳು ಸಂಕಷ್ಟದಲ್ಲಿರುವುದನ್ನ ಮನಗಂಡು ಈ ನಿರ್ಧಾರವನ್ನು ಕೈಗೂಂಡಿದೆ.
ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಹೇರಲಾಗಿರುವ ಲಾಕ್‌ಡೌನ್‌ನಿಂದಾಗಿ ಚೀನಾದ ಕೆಲ ನಾಗರಿಕರು, ವಿದ್ಯಾರ್ಥಿಗಳ, ಪ್ರವಾಸಿಗರು ತಮ್ಮ ದೇಶಕ್ಕೆ ಹೋಗಲು ಸಾಧ್ಯವಾಗದೇ ಇಲ್ಲೇ ಉಳಿದಿದ್ದರು.
ಕೋವಿಡ್ ಕಾಣಿಸಿಕೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರವೂ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ನಿಷೇಧಿಸಿತ್ತು.