ETV Bharat / international

ಚೀನಾದಲ್ಲಿ ಮತ್ತೆ ಕೊರೊನಾ ಅಟ್ಟಹಾಸ: 3 ದಿನದಲ್ಲಿ 1,566 ಜನರಿಗೆ ಸೋಂಕು - China

ಚೀನಾದಲ್ಲಿ ಮೂರು ದಿನಗಳಲ್ಲಿ 1,566 ಜನರಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ 4,632 ಆಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಮಾಹಿತಿ ನೀಡಿದೆ.

COVID-19
ಚೀನಾದಲ್ಲಿ ಮತ್ತೆ ಕೊರೊನಾ ಅಟ್ಟಹಾಸ
author img

By

Published : Apr 18, 2020, 2:41 PM IST

ಬೀಜಿಂಗ್​: ಕೊರೊನಾ ಕೇಂದ್ರ ಬಿಂದು ಚೀನಾದಲ್ಲಿ ಕಳೆದ ಮೂರು ದಿನಗಳಿಂದ ಮತ್ತೆ ಕೋವಿಡ್-19 ರೌದ್ರನರ್ತನ ಮಾಡುತ್ತಿದೆ. ಕೇವಲ ಮೂರು ದಿನಗಳಲ್ಲಿ 1,566 ಜನರಿಗೆ ಸೋಂಕು ತಗುಲಿದ್ದು, ಇಂದು ಹೊಸದಾಗಿ 27 ಮಂದಿಗೆ ವೈರಸ್​ ತಗುಲಿರುವುದು ಪತ್ತೆಯಾಗಿದೆ. ಜೊತೆಗೆ ಸಾವಿನ ಸಂಖ್ಯೆ 4,632 ಆಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು ಕೊರೊನಾ ವೈರಸ್​ ಪೀಡಿತರ ದತ್ತಾಂಶಗಳನ್ನು ಪರಿಷ್ಕರಿಸಿ ಮಾಹಿತಿ ಬಿಡುಗಡೆ ಮಾಡಿದೆ. ಹೊಸ ಅಂಕಿ-ಅಂಶಗಳ ಪ್ರಕಾರ, ಶುಕ್ರವಾರದ ವೇಳೆಗೆ 82,719 ಪ್ರಕರಣಗಳು ದೃಢವಾಗಿವೆ. ಅದರಲ್ಲಿ 4,632 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 1,058 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, 77,029 ರೋಗಿಗಳನ್ನು ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಮಾಡಲಾಗಿದೆ.

ಇನ್ನು ಶುಕ್ರವಾರದ ವೇಳೆಗೆ ಹಾಂಗ್​ಕಾಂಗ್​ನಲ್ಲಿ 4 ಸಾವು ಸೇರಿದಂತೆ 1,021 ಪ್ರಕರಣ ಮತ್ತು ತೈವಾನ್‌ನಲ್ಲಿ 6 ಸಾವು ಸೇರಿ 395 ಪ್ರಕರಣಗಳು ವರದಿಯಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.