ETV Bharat / international

ತಹಬದಿಗೆ ಬಂದ ಕೊರೊನಾ: ನಾಳೆಯಿಂದ ಚೀನಾದಲ್ಲಿ ದೇಶಿಯ ವಿಮಾನಯಾನ ಸೇವೆ ಆರಂಭ

author img

By

Published : Mar 28, 2020, 3:36 PM IST

ಕೊರೊನಾ ವೈರಸ್​ನಿಂದ ಚೀನಾ ಚೇತರಿಸಿಕೊಳ್ಳುತ್ತಿದ್ದು, ವುಹಾನ್ ನಗರ ಹೊರತುಪಡಿಸಿ ಉಳಿದೆಲ್ಲಾ ಕಡೆ ದೇಶಿಯ ನಾಗರಿಕ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ ಅಂತಾ ಚೀನಾ ತಿಳಿಸಿದೆ. ಈಗಾಗಲೇ ಚೀನಾದಲ್ಲಿ ಬಸ್​​ಗಳು ಹಾಗೂ ಸ್ಥಳೀಯ ರೈಲು ಸೇವೆ ಆರಂಭಗೊಂಡಿದ್ದು, ಏಪ್ರಿಲ್​ 8ರಿಂದ ವುಹಾನ್​​​ ನಗರದಿಂದಲೂ ವಿಮಾನಯಾನ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದೆ.

Corona: Country airline resumes in China from tomorrow
ಕೊರೊನಾ: ನಾಳೆಯಿಂದ ಚೀನಾದಲ್ಲಿ ದೇಶಿಯ ವಿಮಾನಯಾನ ಪುನರಾರಂಭ

ಬೀಜಿಂಗ್​: ಕೊರೊನಾ ವೈರಸ್​ನಿಂದಾಗಿ ಚೀನಾ ಸದ್ಯ ಚೇತರಿಸಿಕೊಳ್ಳುತ್ತಿದೆ. ಅಲ್ಲದೆ ಚೀನಾದ ಹಲವು ನಗರಗಳು ಎಂದಿನಂತೆ ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿ ಮಾರ್ಪಾಡಾಗುತ್ತಿವೆ. ಈ ನಡುವೆ ಭಾನುವಾರದಿಂದ ದೇಶಿಯ ನಾಗರಿಕ ವಿಮಾನ ಸೇವೆ ಆರಂಭಗೊಳ್ಳಲಿದೆ ಅಂತ ಚೀನಾ ತಿಳಿಸಿದೆ.

ಕೊರೊನಾ ವೈರಸ್ ಕಾಣಿಸಿಕೊಂಡಿದ್ದ ಹುಬೈ ಪ್ರ್ಯಾಂತ್ಯದಲ್ಲೂ ವಿಮಾನಯಾನ ಆರಂಭಗೊಳ್ಳಲಿದ್ದು, ವೈರಸ್ ಕೇಂದ್ರಬಿಂದುವಾಗಿದ್ದ ವುಹಾನ್​ ನಗರದಲ್ಲಿ ಮಾತ್ರ ಯಥಾಸ್ಥಿತಿ ಮುಂದುವರೆಯಲಿದೆ ಎನ್ನಲಾಗಿದೆ.

ಇನ್ನು ವುಹಾನ್​ ನಗರದಲ್ಲಿ ಕಳೆದೆರಡು ದಿನಗಳಿಂದ ಯಾವುದೇ ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ನಗರದಲ್ಲಿ ಮೂವರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಚೀನಾದಲ್ಲಿ ಒಟ್ಟು 3,295 ಮಂದಿ ಸಾವಿಗೀಡಾಗಿದ್ದಾರೆ. ಹುಬೈ ನಗರವೊಂದರಲ್ಲೇ 67 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ ಪಾಸಿಟಿವ್​ ವರದಿ ಬಂದಿತ್ತು.

ಇದಲ್ಲದೆ ಚೀನಾದ ವುಹಾನ್​ ಹಾಗೂ ಹುಬೈ ಪ್ರ್ಯಾಂತ್ಯದಲ್ಲಿ ಸ್ಥಳೀಯ ಬಸ್​​ ಸೇವೆ ಹಾಗೂ ರೈಲು ಸೇವೆಗಳೂ ಆರಂಭಗೊಂಡಿವೆ. ಇದಕ್ಕೂ ಮೊದಲು ಈ ಎರಡು ನಗರಗಳಲ್ಲಿ ಸಂಪೂರ್ಣ ಲಾಕ್​​ಡೌನ್​ ಆದೇಶ ಜಾರಿ ಮಾಡಿದ್ದಲ್ಲದೆ, 56 ದಶ ಲಕ್ಷಕ್ಕೂ ಅಧಿಕ ಜನರನ್ನು ದಿಗ್ಭಂಧನದಲ್ಲಿಡಲಾಗಿತ್ತು. ವುಹಾನ್​ ನಗರದಿಂದ ವಿಮಾನಯಾನ ಸೇವೆ ಮುಂದಿನ ಏಪ್ರಿಲ್ 8ರಿಂದ ಆರಂಭಗೊಳ್ಳಲಿದೆ ಅಂತ ಸಿಎಎಸಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.