ಬೀಜಿಂಗ್ (ಚೀನಾ): ಚೀನಾದಲ್ಲಿ ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 81,093 ಮಂದಿಯ ಪೈಕಿ 72,703 ಜನರು ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ ಎಂದು ಚೀನಾ ಆರೋಗ್ಯ ಪ್ರಾಧಿಕಾರ ತಿಳಿಸಿದೆ.
ರಕ್ಕಸ ಕೊರೊನಾ ಇಡೀ ಮಾನವ ಸಂಕುಲವನ್ನೇ ಆತಂಕಕ್ಕೆ ದೂಡಿದ್ದು, ಚೀನಾದಲ್ಲಿ ಈ ಸೋಂಕು 3,270 ಕ್ಕೂ ಅಧಿಕ ಮಂದಿಯನ್ನ ಬಲಿ ಪಡೆದಿದೆ. ಕೋವಿಡ್-19 ಸೋಂಕಿತ 81,093 ಮಂದಿಯ ಪೈಕಿ 72,703 ಜನರು ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ. ಇನ್ನೂ 5,120 ಸೋಂಕಿತರಿಗೆ ಚಿಕಿತ್ಸೆ ನೀಡಲಾಗ್ತಿದ್ದು, ಒಂದು ವಾರದೊಳಗೆ ಚೇತರಿಸಿಕೊಳ್ಳುತ್ತಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಹುಬೈನಲ್ಲಿ ಟ್ರೀಟ್ಮೆಂಟ್ ಪಡೆಯುತ್ತಿದ್ದ 447 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಅದರಲ್ಲಿ, ವುಹಾನ್ ಪ್ರಾಂತ್ಯಕ್ಕೆ ಸೇರಿದ 434 ಜನರಿದ್ದಾರೆ. ನಿನ್ನೆ ಒಂದೇ ದಿನದಲ್ಲಿ 39 ಹೊಸ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ.