ಜಕಾರ್ತಾ: ಕಳೆದ ವರ್ಷ ಜನವರಿ 9ರಂದು ನಾಪತ್ತೆಯಾಗಿ ಪೆಸಿಫಿಕ್ ಸಮುದ್ರದಲ್ಲಿ ಪತನಗೊಂಡಿತ್ತು. ಇದೀಗ ವಿಮಾನದ ಕಾಕ್ಪಿಟ್ ವಾಯ್ಸ್ ರೆಕಾರ್ಡರ್ ಅನ್ನು ಯಶಸ್ವಿಯಾಗಿ ಡೌನ್ಲೋಡ್ ಮಾಡಿಕೊಂಡಿದೆ.
ಸಮುದ್ರದಲ್ಲಿ ದೊರೆತಿದ್ದ ಬ್ಲಾಕ್ ಬಾಕ್ಸ್ ಅನ್ನು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿಗೆ ನೀಡಲಾಗಿತ್ತು, ಇದೀಗ ಕಾಕ್ಪಿಟ್ ವಾಯ್ಸ್ ಅನ್ನು ಯಶಸ್ವಿಯಾಗಿ ಡೌನ್ಲೋಡ್ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.
ವಿಮಾನ ಪತನಕ್ಕೂ ಮುನ್ನ ನಡೆದ 2 ಗಂಟೆಗಳ ವಾಯ್ಸ್ ರೆಕಾರ್ಡ್ ಆಗಿರಲಿದ್ದು, 62 ಜನರ ಜಲಸಮಾಧಿಗೆ ಕಾರಣ ತಿಳಿಯಲು ಸಹಾಯವಾಗಲಿದೆ ಎಂದು ಸಮಿತಿಯ ಮುಖ್ಯಸ್ಥ ಸೊರ್ಜಾಂಟೊ ಟ್ಜಾಜೊನೊ ಹೇಳಿದ್ದಾರೆ.
ಕಾಕ್ಪಿಟ್ ರೆಕಾರ್ಡರ್ನಿಂದ ಎಲ್ಲಾ ಚಾನೆಲ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಅದರಲ್ಲಿ 4ನೇ ಚಾನೆಲ್ ಡೌನ್ಲೋಡ್ ಮಾಡಿಕೊಳ್ಳುವಲ್ಲಿ ಅಡ್ಡಿಯುಂಟಾಗಿದೆ ಎಂದಿದ್ದಾರೆ.
ಇನ್ನು ಡೌನ್ಲೋಡ್ ಮಾಡಿಕೊಳ್ಳಲಾದ ದತ್ತಾಂಶಗಳನ್ನು ತನಿಖೆಗಾಗಿ ಬಳಸಿಕೊಳ್ಳಲಿದ್ದು, ವಿಮಾನ ಪತನಕ್ಕೆ ಕಾರಣವಾದ ಅಂಶ ಹೊರಬರಲಿದ ಎಂದಿದ್ದಾರೆ.
ಜಕಾರ್ತಾದಿಂದ ಪಶ್ಚಿಮ ಕಾಲಿಮಂತನ್ ಪ್ರಾಂತ್ಯದ ಪೊಂಟಿಯಾನಕ್ ಕಡೆಗೆ ಹೊರಟಿದ್ದ 62 ಪ್ರಯಾಣಿಕರನ್ನು ಹೊತ್ತ ಶ್ರೀವಿಜಯ ಏರ್ ಬೋಯಿಂಗ್ 737-500 ವಿಮಾನ ಸಮುದ್ರಕ್ಕೆ ಅಪ್ಪಳಿಸಿತ್ತು.