ಹಾ ಗಿಯಾಂಗ್(ವಿಯೆಟ್ನಾಂ): ಚೀನಾ ಗಡಿ ವಿಚಾರದಲ್ಲಿ ಕೇವಲ ಭಾರತದೊಂದಿಗೆ ಮಾತ್ರ ಸಮಸ್ಯೆಯನ್ನು ಸೃಷ್ಟಿಸಿಕೊಂಡಿಲ್ಲ. ತನ್ನ ನೆರೆಹೊರೆಯ ರಾಷ್ಟ್ರಗಳೊಂದಿಗೆ ಕ್ಯಾತೆ ತೆಗೆದು, ವಿವಾದವನ್ನು ಮುಂದುವರೆಸುತ್ತಿದೆ. ಈಗ ಚೀನಾಗೆ ನೆರೆಯ ರಾಷ್ಟ್ರವಾದ ವಿಯೆಟ್ನಾಂ ಜೊತೆಗೆ ಹೊಸ ವಿವಾದದವೊಂದನ್ನು ಬೇಕಂತಲೇ ಮೈಮೇಲೆ ಎಳೆದುಕೊಂಡಿದೆ.
ಉತ್ತರ ವಿಯೆಟ್ನಾಂನ ಹಾ ಗಿಯಾಂಗ್ ಪ್ರಾಂತ್ಯದಲ್ಲಿ ಚೀನಾದ ಸೈನಿಕರು ವಿಯೆಟ್ನಾಂನಲ್ಲಿ ಕಾರ್ಮಿಕರ ಮೇಲೆ ಕಲ್ಲು ಎಸೆದು, ನಿಂದಿಸಿದ್ದಾರೆ. ಲೀ ಆನ್ ಕ್ವಾನ್ ಎಂಬುವವರು ಜನವರಿ 3ರಂದು ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು, ಈ ವಿಡಿಯೋದಲ್ಲಿ ಚೀನಾ ಸೈನಿಕರು ಕಲ್ಲು ಮಣ್ಣಿನ ಸವೆತ ತಡೆಯಲು ಕಾರ್ಮಿಕರು ಕೆಲಸ ಮಾಡುತ್ತಿದ್ದ ಜಾಗದಲ್ಲಿದ್ದ ಜೆಸಿಬಿ ಮೇಲೆ ಕಲ್ಲು ತೂರಾಟ ನಡೆಸಿರುವುದು ಕಂಡು ಬಂದಿದೆ ಎಂದು ದಿ ಹಾಂಗ್ ಕಾಂಗ್ ಪೋಸ್ಟ್ ವರದಿ ಮಾಡಿದೆ.
-
"Seriously?"
— Lee Ann Quann (@AnnQuann) January 3, 2022 " class="align-text-top noRightClick twitterSection" data="
Soldiers from People Liberation Army shouting and throwing rocks at Vietnamese excavators along the Sino-Vietnam border.
Civilian workers have been strengthing the river banks on the Vietnam's side to prevent landslides as the current picks up. pic.twitter.com/IuiRfy4BJp
">"Seriously?"
— Lee Ann Quann (@AnnQuann) January 3, 2022
Soldiers from People Liberation Army shouting and throwing rocks at Vietnamese excavators along the Sino-Vietnam border.
Civilian workers have been strengthing the river banks on the Vietnam's side to prevent landslides as the current picks up. pic.twitter.com/IuiRfy4BJp"Seriously?"
— Lee Ann Quann (@AnnQuann) January 3, 2022
Soldiers from People Liberation Army shouting and throwing rocks at Vietnamese excavators along the Sino-Vietnam border.
Civilian workers have been strengthing the river banks on the Vietnam's side to prevent landslides as the current picks up. pic.twitter.com/IuiRfy4BJp
ವಿಯೆಟ್ನಾಂನ ಸ್ಥಳೀಯ ಭಾಷೆಯ ಬ್ಲಾಗ್ ಟ್ವೀಟ್ ಅನ್ನು ಉಲ್ಲೇಖಿಸಿ, ಜನವರಿ 4ರಂದು ಲೇಖನವೊಂದನ್ನು ಬರೆದಿದ್ದು, 1979 ರ ಚೀನಾ-ವಿಯೆಟ್ನಾಂ ಯುದ್ಧವನ್ನು ಸ್ಮರಿಸಿಕೊಂಡಿದೆ. ಚೀನಾ-ವಿಯೆಟ್ನಾಂ ನಡುವೆ ಭೂ ಗಡಿಯನ್ನು ಗುರುತಿಸುವ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಚೀನಾದ ಕಡೆಯವರು ಉತ್ತರ ವಿಯೆಟ್ನಾಂ ಅನ್ನು ಆಕ್ರಮಣ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬ್ರಿಟಿಷ್ ಪತ್ರಕರ್ತ ಬಿಲ್ ಹೇಟನ್ ವಿಯೆಟ್ನಾಂ ಮತ್ತು ಚೀನಾ ನಡುವಿನ ಗಡಿಯಲ್ಲಿ ನಿಸ್ಸಂಶಯವಾಗಿ ಏನೋ ನಡೆಯುತ್ತಿದೆ. ಎರಡೂ ದೇಶಗಳು ಸಂಘರ್ಷಕ್ಕೆ ಸಿದ್ಧವಾಗುತ್ತಿರಬಹುದು ಎಂದು ನನಗೆ ಅನ್ನಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
- — TxtdariThbgs (@Thbgs_) January 3, 2022 " class="align-text-top noRightClick twitterSection" data="
— TxtdariThbgs (@Thbgs_) January 3, 2022
">— TxtdariThbgs (@Thbgs_) January 3, 2022
ಚೀನಾ ಸೈನಿಕರು ಕುಡಿದಿದ್ದಾರೆಯೇ?: ಲೀ ಆನ್ ಕ್ವಾನ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಒಬ್ಬ ವ್ಯಕ್ತಿ 'ಚೀನಾ ಸೈನಿಕರು ಮದ್ಯ ಸೇವಿಸಿದ್ದಾರೆಯೇ?' ಎಂದು ಪ್ರಶ್ನಿಸಿದ್ದು, ಮತ್ತೊಬ್ಬ ವ್ಯಕ್ತಿ 'ಚೀನಾದ ನೆರೆ ದೇಶವಾಗುವುದು ಅತ್ಯಂತ ತಲೆನೋವಿನ ಸಂಗತಿ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.
-
Are they drunk ?
— SunArmy83 #Z0ZZ #Zemmour2022 (@SunArmy83) January 3, 2022 " class="align-text-top noRightClick twitterSection" data="
">Are they drunk ?
— SunArmy83 #Z0ZZ #Zemmour2022 (@SunArmy83) January 3, 2022Are they drunk ?
— SunArmy83 #Z0ZZ #Zemmour2022 (@SunArmy83) January 3, 2022
ಗಿವಾಯೋ ವು ಎಂಬಾತ ಟ್ವೀಟ್ಗೆ ಕಮೆಂಟ್ ಮಾಡಿದ್ದು, 'ಚೀನಾ ಸೈನಿಕರು ಎಸೆದ ಕಲ್ಲುಗಳು ಯಾರಿಗಾದರೂ ಹಾನಿ ಮಾಡಿವೆಯೇ?, ಇದು ಕಲ್ಲನ್ನು ದೂರ ಎಸೆಯುವ ಸವಾಲು ಇರಬಹುದು' ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಲೀ ಆನ್ ಕ್ವಾನ್ ಇದು ನನ್ನ ಅಭಿಪ್ರಾಯವಷ್ಟೇ, ಅವರು ಕಲ್ಲುಗಳನ್ನ ಎಸೆಯಲು ಬೇರೆ ಪ್ರದೇಶವೂ ಇತ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಭಾರತ ಮತ್ತು ಚೀನಾದ ನಡುವೆ 14ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಅಂತ್ಯ