ETV Bharat / international

ಚಿಪ್ಪು ಹಂದಿಯಿಂದ ಕೊರೊನಾ ವೈರಸ್​ ಹರಡುತ್ತಿದೆಯೇ? ಚೀನಾ ವಿಜ್ಞಾನಿಗಳು ಹೇಳ್ತಿರೋದೇನು?

author img

By

Published : Feb 7, 2020, 5:54 PM IST

ಕೊರೊನಾ ವೈರಸ್​ ಹರಡಲು ಚಿಪ್ಪು ಹಂದಿಗಳು ಕಾರಣವಾಗಿರಬಹುದು ಎಂಬ ಮಾಹಿತಿಯನ್ನು ದಕ್ಷಿಣ ಚೀನಾ ಕೃಷಿ ವಿಶ್ವವಿದ್ಯಾಲಯದ ಅಧ್ಯಯನವೊಂದು ತಿಳಿಸಿದೆ.

pangolins may've spread coronavirus
ಚಿಪ್ಪು ಹಂದಿಯಿಂದ ಕೊರೊನಾ ವೈರಸ್

ಬೀಜಿಂಗ್​: ಹಾವುಗಳು ಹಾಗೂ ಬಾವಲಿಗಳ ಬಳಿಕ ಇದೀಗ ಚಿಪ್ಪು ಹಂದಿಗಳು ಚೀನಾ ಹಾಗೂ ಪ್ರಪಂಚದ ಇತರ ರಾಷ್ಟ್ರಗಳಲ್ಲಿ ಮಹಾಮಾರಿ ಕೊರೊನಾ ವೈರಸ್​ ಹರಡಲು ಕಾರಣವಾಗಿರಬಹುದು ಎಂಬ ಸಂಶಯವನ್ನು ಚೀನಾದ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಚೀನಾ ಕೃಷಿ ವಿಶ್ವವಿದ್ಯಾಲಯದ ನೇತೃತ್ವದ ಹೊಸ ಅಧ್ಯಯನದ ಪ್ರಕಾರ, ಚಿಪ್ಪು ಹಂದಿಗಳಿಂದ ಬೇರ್ಪಟ್ಟ ವೈರಸ್​ನ ತಳಿಯ ಜಿನೋಮ್​ (ವಂಶವಾಹಿಗಳು ಹಾಗೂ ಡಿಎನ್​ಎ), ಶೇ.99 ರಷ್ಟು ಕೊರೊನಾ ವೈರಸ್ ಸೋಂಕಿತ ಜನರನ್ನ ಹೋಲುತ್ತದೆ. ಹೀಗಾಗಿ ಚಿಪ್ಪು ಹಂದಿಗಳು ಸೋಂಕು ಹರಡುತ್ತದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ನಮ್ಮ ಸಂಶೋಧನಾ ತಂಡವು ಕಾಡು ಪ್ರಾಣಿಗಳ 1,000 ಕ್ಕೂ ಹೆಚ್ಚು ಮೆಟಜೆನೊಮ್ ಸ್ಯಾಂಪಲ್​​ಗಳನ್ನು ವಿಶ್ಲೇಷಿಸಿದ್ದು, ಇವುಗಳಲ್ಲಿ ಚಿಪ್ಪು ಹಂದಿಗಳು ಸೋಂಕನ್ನ ಹೋಲುವ ಲಕ್ಷಣಗಳನ್ನು ಹಾಗೂ ಶೇ.70 ರಷ್ಟು ಸೋಂಕನ್ನು ಹರಡುವ ಪಾಸಿಟಿವ್​ ರೇಟ್​ ಹೊಂದಿವೆ ಎಂದು ವಿಶ್ವವಿದ್ಯಾನಿಲಯದ ಅಧ್ಯಕ್ಷ ಲಿಯು ಯಾಹೋಂಗ್ ತಿಳಿಸಿದ್ದಾರೆ.

ಚೀನಾದಲ್ಲಿ ಕೊರೊನಾ ವೈರಸ್​ಗೆ ಬಲಿಯಾದವರ ಸಂಖ್ಯೆ 630ಕ್ಕೆ ಏರಿಕೆಯಾಗಿದ್ದು, ಹಾವು, ಬಾವಲಿಗಳು ಸೇರಿದಂತೆ ಚೀನೀಯರ ಆಹಾರವಾದ ವಿಲಕ್ಷಣ ಪ್ರಾಣಿಗಳ ವ್ಯಾಪಾರವನ್ನು ಚೀನಾ ತಾತ್ಕಾಲಿಕವಾಗಿ ನಿಷೇಧಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.