ಬೀಜಿಂಗ್(ಚೀನಾ): ಕೋವಿಡ್ ಮತ್ತೆ ಅಲ್ಲಲ್ಲಿ ತನ್ನ ಅಟ್ಟಹಾಸವನ್ನು ಆರಂಭಿಸುತ್ತಿದೆ. ಚೀನಾದಲ್ಲೂ ಕೆಲವೊಂದು ಪ್ರದೇಶಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಈ ಮಧ್ಯೆ ಚೀನಾ ತನ್ನ ಕೋವಿಡ್ ಲಸಿಕೆಗಳನ್ನು ವಿಶ್ವದಾದ್ಯಂತ ಹಂಚುತ್ತಿದ್ದು, ವ್ಯಾಕ್ಸಿನ್ ಡಿಪ್ಲೋಮಸಿಯಲ್ಲಿ ತೊಡಗಿಸಿಕೊಂಡಿದೆ.
100 ದೇಶಗಳಿಗೆ 750 ದಶಲಕ್ಷ ಡೋಸ್ ಲಸಿಕೆಗಳನ್ನು ಒದಗಿಸಿರುವ ಚೀನಾ ತನ್ನ ಕೋವಿಡ್ ಲಸಿಕೆಗಳಾದ ಸಿನೋಫಾರ್ಮ್ ಮತ್ತು ಸಿನೋವ್ಯಾಕ್ ಅನ್ನು 'ಜಾಗತಿಕ ಸಾರ್ವಜನಿಕ ಹಿತಾಸಕ್ತಿ' ಎಂದು ಬಿಂಬಿಸುವ ನಿಟ್ಟಿನಲ್ಲಿ ತನ್ನ ಪ್ರಯತ್ನವನ್ನು ಮುಂದುವರೆಸುತ್ತಿದೆ.
ಚೀನಾ ಸರ್ಕಾರದ ಪ್ರಕಾರ, 190 ಮಿಲಿಯನ್ ಡೋಸ್‌ಗಳನ್ನು ಆಸಿಯಾನ್ ಸದಸ್ಯ ರಾಷ್ಟ್ರಗಳಿಗೆ ರವಾನಿಸಲಾಗಿದೆ. ಇದರಲ್ಲಿ ಹತ್ತು ಆಗ್ನೇಯ ಏಷ್ಯಾದ ರಾಷ್ಟ್ರಗಳಾದ ಬ್ರೂನೈ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಾಪುರ, ಥೈಲ್ಯಾಂಡ್ ಮತ್ತು ವಿಯೆಟ್ನಾಂಗಳು ಸೇರಿವೆ. ಈ ಕುರಿತು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
-
#China has provided more than 750 million doses of #vaccines to over 100 countries so far. Among them, more than 190 million doses went to the #ASEAN countries, along with other much-needed anti-#COVID supplies.
— Spokesperson发言人办公室 (@MFA_China) August 4, 2021 " class="align-text-top noRightClick twitterSection" data="
">#China has provided more than 750 million doses of #vaccines to over 100 countries so far. Among them, more than 190 million doses went to the #ASEAN countries, along with other much-needed anti-#COVID supplies.
— Spokesperson发言人办公室 (@MFA_China) August 4, 2021#China has provided more than 750 million doses of #vaccines to over 100 countries so far. Among them, more than 190 million doses went to the #ASEAN countries, along with other much-needed anti-#COVID supplies.
— Spokesperson发言人办公室 (@MFA_China) August 4, 2021
ಚೀನಾದ ವಿದೇಶಾಂಗ ಇಲಾಖೆಯ ವಕ್ತಾರರು ಮಾಹಿತಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡ ಬೆನ್ನಲ್ಲೇ ಕಾಮೆಂಟ್ ಮಾಡಿರುವ ನೆಟ್ಟಿಗರು, ಚೀನಾದ ವ್ಯಾಕ್ಸಿನ್ ಡಿಪ್ಲೋಮಸಿ ಮತ್ತು ಚೀನಾ ಕೋವಿಡ್ ಮತ್ತು ಕೋವಿಡ್ ವ್ಯಾಕ್ಸಿನ್ ಹೆಸರಲ್ಲಿ ಮಾಡುತ್ತಿರುವ ವ್ಯಾಪಾರ ವ್ಯವಹಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.
-
It was business not aid. pic.twitter.com/bPdMKlruxG
— Darshan (@shankheswarboy) August 4, 2021 " class="align-text-top noRightClick twitterSection" data="
">It was business not aid. pic.twitter.com/bPdMKlruxG
— Darshan (@shankheswarboy) August 4, 2021It was business not aid. pic.twitter.com/bPdMKlruxG
— Darshan (@shankheswarboy) August 4, 2021
ಇದರಲ್ಲಿ ಓರ್ವ ವ್ಯಕ್ತಿ ಎಷ್ಟು ಕೊರೊನಾ ಕೇಸ್ಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಮೊದಲು ಸಮಸ್ಯೆ ಸೃಷ್ಟಿಸಿ ನಂತರ ಪರಿಹಾರವನ್ನು ಮಾರಾಟ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ಲಸಿಕೆಗಳು ಕೆಲಸ ಮಾಡುವುದಿಲ್ಲ ಎಂದು ಚೀನಾದ ವಕ್ತಾರರ ಕಾಲೆಳೆದಿದ್ದಾರೆ.
-
First create problems then sell the solution
— ALOK PANDEY (@alokspndy) August 4, 2021 " class="align-text-top noRightClick twitterSection" data="
">First create problems then sell the solution
— ALOK PANDEY (@alokspndy) August 4, 2021First create problems then sell the solution
— ALOK PANDEY (@alokspndy) August 4, 2021
ಇನ್ನೊಬ್ಬರು ಚೀನಾ ವಿದೇಶಗಳಿಗೆ ಲಸಿಕೆ ಪೂರೈಸಿರುವುದು ಸಹಾಯವಲ್ಲ, ಪಕ್ಕಾ ವ್ಯವಹಾರ ಎಂದು ಅಭಿಪ್ರಾಯಪಟ್ಟಿದ್ದಾರೆ. ಜಗತ್ತನ್ನು ನಾಶ ಮಾಡಿದ್ದಕ್ಕೆ ಧನ್ಯವಾದ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: Tokyo Olympics Hockey: ನಾಲ್ಕು ದಶಕಗಳ ಬಳಿಕ ಹಾಕಿಯಲ್ಲಿ ಪದಕ ಗೆದ್ದು ಬೀಗಿದ ಭಾರತ!