ಮೆಲ್ಬೋರ್ನ್ (ಆಸ್ಟ್ರೇಲಿಯಾ): ವಿಶ್ವದ ಹಲವು ದೇಶಗಳಲ್ಲಿ ಕೆಲಸ ಮಾಡುತ್ತಿರುವ ಚೀನಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಪಕ್ಷದವರೆನ್ನಲಾದ ಸುಮಾರು 2 ಮಿಲಿಯನ್ ಮಂದಿಯ ಕೆಲವು ದಾಖಲೆಗಳು ಸೋರಿಕೆಯಾಗಿವೆ ಎಂದು ಸುದ್ದಿಪತ್ರಿಕೆ 'ದಿ ಆಸ್ಟ್ರೇಲಿಯನ್' ವರದಿ ಮಾಡಿದೆ.
ಆಸ್ಟ್ರೇಲಿಯಾ ಮತ್ತು ಚೀನಾ ನಡುವೆ ಉದ್ವಿಗ್ನತೆಯ ಮಧ್ಯೆ ಈ ವಿಚಾರ ಬಹಿರಂಗವಾಗಿದ್ದು, ಪಕ್ಷದ ಸ್ಥಾನ, ಜನ್ಮ ದಿನಾಂಕ, ರಾಷ್ಟ್ರೀಯ ಗುರುತಿನ ಸಂಖ್ಯೆ ಮತ್ತು ಅವರ ಅಧಿಕೃತ ದಾಖಲೆಗಳು ಸೋರಿಕೆಯಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಸದಸ್ಯರು ಫೋಕ್ಸ್ವ್ಯಾಗನ್, ಬೋಯಿಂಗ್, ಔಷಧೀಯ ಕಂಪನಿಗಳಾದ ಫೈಜರ್, ಅಸ್ಟ್ರಾಜೆನೆಕಾ, ಎಎನ್ಝೆಡ್ ಹಾಗೂ ಹಣಕಾಸು ಸಂಸ್ಥೆಗಳಾದ ಹೆಚ್ಎಸ್ಬಿಪಿ ಮುಂತಾದ ಹಣಕಾಸು ಕಂಪನಿಗಳು ಕೆಲಸ ಮಾಡುತ್ತಿದ್ದಾರೆ ಎಂದು 'ದಿ ಆಸ್ಟ್ರೇಲಿಯನ್' ಆರೋಪಿಸಿದೆ.
ಇದನ್ನೂ ಓದಿ: ಬ್ರಹ್ಮಪುತ್ರನಿಗೆ ಚೀನಾ ಅಣೆಕಟ್ಟು ನಿರ್ಮಿಸೋದು ಸುಲಭವಾ..?: ಇಲ್ಲಿದೆ ಪೂರ್ಣ ಮಾಹಿತಿ
ಶಾಂಘೈ ಸರ್ವರ್ನಿಂದ ಗುಪ್ತಚರ ಇಲಾಖೆಯೊಂದು ಮಾಹಿತಿ ಹೊರತೆಗೆದಿದ್ದು, ಸುಮಾರು 1.95 ಮಿಲಿಯನ್ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಸದಸ್ಯರ ವಿವರಗಳು ಅದರಲ್ಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಚೀನಾದ ಆಡಳಿತಾರೂಢ ಪಕ್ಷವಾದ ಸಿಪಿಸಿ ಶಾಂಘೈನಲ್ಲಿರುವ ಆಸ್ಟ್ರೇಲಿಯಾ, ಬ್ರಿಟಿಷ್ ಮತ್ತು ಯುಎಸ್ ದೂತಾವಾಸ ಕಚೇರಿಗಳಲ್ಲಿನ ಮಾಹಿತಿ ಕದಿಯಲು ಚೀನಾದ ಸರ್ಕಾರಿ ಸಂಸ್ಥೆಯಾದ ಶಾಂಘೈ ವಿದೇಶಿ ಸಂಸ್ಥೆ ಸೇವಾ ಇಲಾಖೆಯನ್ನು ಬಳಸಿಕೊಂಡು ಸ್ಥಳೀಯ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ ಆರೋಪಿಸಲಾಗಿದೆ.
ಶಾಂಘೈನಲ್ಲಿರುವ ಕನಿಷ್ಠ 10 ವಿದೇಶಿ ದೂತಾವಾಸ ಕಚೇರಿಗಳಲ್ಲಿ ಹಿರಿಯ ರಾಜಕೀಯ ಮತ್ತು ಸರ್ಕಾರಿ ವ್ಯವಹಾರಗಳ ತಜ್ಞರು, ಗುಮಾಸ್ತರು, ಆರ್ಥಿಕ ಸಲಹೆಗಾರರು ಮತ್ತು ಕಾರ್ಯನಿರ್ವಾಹಕ ಸಹಾಯಕರಾಗಿಯೂ ಕೂಡಾ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.