ETV Bharat / international

ಗಂಟೆಗೆ 600 ಕಿ.ಮೀ ವೇಗದಲ್ಲಿ ಚಲಿಸುವ ಜಗತ್ತಿನ ಮೊದಲ ರೈಲು ಇದು.. - ಚೀನಾ

ಹೆಚ್ಚಿನ ವೇಗವನ್ನು ಉತ್ತಮವಾಗಿ ಬಳಸಿಕೊಳ್ಳುವಂತಹ ಅಂತರ ನಗರ ಅಥವಾ ಅಂತರ-ಪ್ರಾಂತ್ಯದ ಮ್ಯಾಗ್ಲೆವ್ ರೇಖೆಗಳು ಚೀನಾದಲ್ಲಿ ಇನ್ನೂ ಇಲ್ಲವಾದರೂ, ಶಾಂಘೈ ಮತ್ತು ಚೆಂಗ್ಡು ಸೇರಿದಂತೆ ಕೆಲವು ನಗರಗಳಲ್ಲಿ ಸಂಶೋಧನೆ ಆರಂಭಿಸಿದೆ. 600 ಕಿಲೋಮೀಟರ್ ವೇಗದಲ್ಲಿ ಬೀಜಿಂಗ್‌ನಿಂದ ಶಾಂಘೈಗೆ ರೈಲಿನಲ್ಲಿ ಪ್ರಯಾಣಿಸಲು ಕೇವಲ 2.5 ಗಂಟೆಗಳು ಬೇಕಾಗುತ್ತವೆ..

China unveils 600 kph maglev train - state media
ಗಂಟೆಗೆ 600 ಕಿ.ಮೀ ವೇಗದಲ್ಲಿ ಚಲಿಸುವ ಜಗತ್ತಿನ ಮೊದಲ ರೈಲು ಇದು...!
author img

By

Published : Jul 20, 2021, 9:45 PM IST

ಬೀಜಿಂಗ್‌ : ನೆರೆಯ ಚೀನಾ ಗಂಟೆಗೆ 600 ಕಿಲೋಮೀಟರ್ ವೇಗದಲ್ಲಿ ಚಲಿಸುವ ಮ್ಯಾಗ್ಲೆವ್ ರೈಲನ್ನು ಇಂದು ಅನಾವರಣಗೊಳಿಸಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಡ್ರ್ಯಾಗನ್‌ ದೇಶದ ಕರಾವಳಿ ನಗರವಾದ ಕಿಂಗ್ಡಾವೊದಲ್ಲಿ ರೈಲನ್ನು ಅಭಿವೃದ್ಧಿ ಪಡಿಸಲಾಗಿದೆ. ನೆಲದ ಮೇಲೆ ಸಂಚರಿಸುವ ಜಗತ್ತಿನಲ್ಲೇ ಅತ್ಯಂತ ಅತಿ ವೇಗದ ರೈಲು ಇದಾಗಿದೆ.

ಎಲೆಕ್ಟ್ರೋ-ಮ್ಯಾಗ್ನೆಟಿಕ್ ಫೋರ್ಸ್ ಬಳಸಿ ಮ್ಯಾಗ್ಲೆವ್ ರೈಲು ನಿರ್ಮಿಸಲಾಗಿದೆ. ಚೀನಾ ಸುಮಾರು ಎರಡು ದಶಕಗಳಿಂದ ತಂತ್ರಜ್ಞಾನವನ್ನು ಬಹಳ ಸೀಮಿತ ಪ್ರಮಾಣದಲ್ಲಿ ವೇಗದ ರೈಲನ್ನು ಬಳಸುತ್ತಿದೆ. ಶಾಂಘೈನ ಒಂದು ವಿಮಾನ ನಿಲ್ದಾಣದಿಂದ ಪಟ್ಟಣ ನಡುವೆ ಮ್ಯಾಗ್ಲೆವ್ ಸಂಚಾರ ನಡೆಸುತ್ತಿದೆ.

ಹೆಚ್ಚಿನ ವೇಗವನ್ನು ಉತ್ತಮವಾಗಿ ಬಳಸಿಕೊಳ್ಳುವಂತಹ ಅಂತರ ನಗರ ಅಥವಾ ಅಂತರ-ಪ್ರಾಂತ್ಯದ ಮ್ಯಾಗ್ಲೆವ್ ರೇಖೆಗಳು ಚೀನಾದಲ್ಲಿ ಇನ್ನೂ ಇಲ್ಲವಾದರೂ, ಶಾಂಘೈ ಮತ್ತು ಚೆಂಗ್ಡು ಸೇರಿದಂತೆ ಕೆಲವು ನಗರಗಳಲ್ಲಿ ಸಂಶೋಧನೆ ಆರಂಭಿಸಿದೆ. 600 ಕಿಲೋಮೀಟರ್ ವೇಗದಲ್ಲಿ ಬೀಜಿಂಗ್‌ನಿಂದ ಶಾಂಘೈಗೆ ರೈಲಿನಲ್ಲಿ ಪ್ರಯಾಣಿಸಲು ಕೇವಲ 2.5 ಗಂಟೆಗಳು ಬೇಕಾಗುತ್ತವೆ.

ಇದು 1,000 ಕಿ.ಮೀ (620 ಮೈಲಿ) ಗಿಂತ ಹೆಚ್ಚಿನ ಪ್ರಯಾಣವಾಗಿದೆ. ಈ ನಗರಗಳ ಸಂಪರ್ಕಕ್ಕೆ ವಿಮಾನದಲ್ಲಿ 3 ಗಂಟೆ ಮತ್ತು ಅತಿ ವೇಗದ ರೈಲು ಮೂಲಕ 5.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: ತಮ್ಮದೇ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಕಳುಹಿಸಿದ ಚೀನಾ

ಭಾರತದಲ್ಲಿ ಘಟಿಮಾನ್‌ ಎಕ್ಸ್‌ಪ್ರೆಸ್ ರೈಲಿನ ವೇಗ 1 ಗಂಟೆಗೆ 160 ಕಿಲೋಮೀಟರ್‌ ಇದೆ. 2021ರಲ್ಲಿ ದೇಶದಲ್ಲೇ ಅತಿ ವೇಗದ ರೈಲು ಎನಿಸಿದೆ. ದೆಹಲಿ ಹಾಗೂ ಜಾನ್ಸಿ ನಡುವೆ ಈ ರೈಲು ಸಂಚಾರ ನಡೆಸುತ್ತಿದೆ.

ವಿಶ್ವದ ಅತಿ ವೇಗದ ರೈಲುಗಳು

L0 ಸರಣಿ ಮ್ಯಾಗ್ಲೆವ್: 374 mph - ಜಪಾನ್‌

ಟಿಜಿವಿ ಪಿಒಎಸ್‌: 357 mph - ಫ್ರಾನ್ಸ್‌

CRH380A ಹೆಕ್ಸಿ: 302 mph - ಚೀನಾ

ಶಾಂಘೈ ಮ್ಯಾಗ್ಲೆವ್: 268 mph - ಚೀನಾ

HEMU-430X: 262 mph - ದಕ್ಷಿಣ ಕೊರಿಯಾ

ಫಕ್ಸಿಂಗ್ ಹಾವೊ ಸಿಆರ್ 400 ಎಎಫ್ / ಬಿಎಫ್ : 260 mph - ಚೀನಾ

ಫ್ರೀಸಿಯರೋಸಾ 1000: 245 mph - ಇಟಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.