ಬೀಜಿಂಗ್ : ಮೊದಲ ಬಾರಿ ಚೀನಾವು ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡ ತನ್ನ ನಾಲ್ವರು ಯೋಧರ ಕುರಿತು ಮಾಹಿತಿ ಬಿಚ್ಚಿಟ್ಟಿದೆ.
ಚೀನಾದ ಕೇಂದ್ರ ಮಿಲಿಟರಿ ಆಯೋಗವು ಭಾರತ-ಚೀನಾ ಗಡಿ ಸಂಘರ್ಷದಲ್ಲಿ ಬಲಿಯಾದ ನಾಲ್ವರು ಸೈನಿಕರಿಗೆ ಮರಣೋತ್ತರ ಪ್ರಶಸ್ತಿ ನೀಡಿ ಗೌರವಿಸಿದೆ ಎಂಬ ಮಾಹಿತಿ ಚೀನಾದ ಮಾಧ್ಯಮಗಳಿಂದ ಲಭ್ಯವಾಗಿದೆ. ಈ ಮೂಲಕ ಚೀನಾ ತನ್ನ ನಾಲ್ವರು ಯೋಧರು ಹುತಾತ್ಮರಾಗಿದ್ದನ್ನ ಒಪ್ಪಿಕೊಂಡಿದೆ.
ಅಲ್ಲದೇ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಕರ್ನಲ್ಗೆ ಗೌರವ ಪ್ರಶಸ್ತಿಯನ್ನು ಚೀನಾದ ಕೇಂದ್ರ ಮಿಲಿಟರಿ ಆಯೋಗ ನೀಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
2020ರ ಜೂನ್ನಲ್ಲಿ ಭಾರತ-ಚೀನಾ ಸೈನಿಕರ ನಡುವೆ ನಡೆದಿದ್ದ ಸಂಘರ್ಷದಲ್ಲಿ 20ಕ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಆದರೆ, ಈವರೆಗೆ ತನ್ನ ಮೃತ ಯೋಧರ ಸಂಖ್ಯೆ, ಮಾಹಿತಿಯನ್ನ ಚೀನಾ ಬಹಿರಂಗಪಡಿಸಿರಲಿಲ್ಲ.