ಬೀಜಿಂಗ್: ಚೀನಾ ತನ್ನ ಮೊದಲ ಮಾನವರಹಿತ ಬಾಹ್ಯಾಕಾಶ ನೌಕೆಯನ್ನು ಹೈನಾನ್‌ನ ದಕ್ಷಿಣ ಪ್ರಾಂತ್ಯದ ವೆನ್‌ಚಾಂಗ್ ಬಾಹ್ಯಾಕಾಶ ನೌಕೆ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಳಿಸಿದೆ ಎಂದು ಸರ್ಕಾರಿ ಸಿಜಿಟಿಎನ್ ವರದಿ ಮಾಡಿದೆ.
ಇಂದು ಬೆಳಗ್ಗೆ 4.30 ಕ್ಕೆ (ಬೀಜಿಂಗ್ ಸಮಯ) ಲಾಂಗ್ ಮಾರ್ಚ್ -5 ರಾಕೆಟ್ ಮೂಲಕ ಬಾಹ್ಯಾಕಾಶ ನೌಕೆಯನ್ನು ವೆನ್‌ಚಾಂಗ್ ಬಾಹ್ಯಾಕಾಶ ನೌಕೆ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಯ್ತು. ಚಾಂಗ್ಇ -5 ಚೀನಾದ ಏರೋಸ್ಪೇಸ್ ಇತಿಹಾಸದಲ್ಲಿ ಅತ್ಯಂತ ಸಂಕೀರ್ಣ ಮತ್ತು ಸವಾಲಿನ ಕಾರ್ಯಾಚರಣೆಗಳಲ್ಲಿ ಒಂದಾಗಿದೆ, ಕಳೆದ 40 ವರ್ಷಗಳ ನಂತರ ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ತರುವ ಮೊದಲ ಮಿಷನ್ ಇದಾಗಿದೆ.
ಚಂದ್ರನ ಮೇಲ್ಮೈ ಮಾದರಿಗಳನ್ನು ಸಂಗ್ರಹಿಸಲು ಯುಎಸ್ ಗಗನಯಾತ್ರಿಗಳನ್ನು ಚಂದ್ರನಲ್ಲಿಗೆ ಕಳುಹಿಸಿತು. ಸೋವಿಯತ್ ಒಕ್ಕೂಟ ಮಾನವರಹಿತ ನೌಕೆಗಳನ್ನ ಚಂದ್ರನಲ್ಲಿಗೆ ಕಳುಹಿಸಿ ಮತ್ತೆ ಭೂಮಿಗೆ ಮರಳಿ ತರುವಲ್ಲಿ ಯಶಸ್ವಿಯಾಗಿದ್ದವು. ಆದರೆ, ಚೀನಾ ಮಾನವರಹಿತ ರೆಂಡೆಜ್ವಸ್ ಮತ್ತು ಚಂದ್ರನ ಕಕ್ಷೆಯಲ್ಲಿ ಡಾಕಿಂಗ್ ಸೇರಿದಂತೆ ಒಂದು ಸಂಕೀರ್ಣವಾದ ತಾಂತ್ರಿಕ ವಿಧಾನವನ್ನು ಆರಿಸಿಕೊಂಡಿದೆ. ಚೀನಾ ಉಡ್ಡಯನ ಮಾಡಿರುವ ನೌಕೆ ಚಂದ್ರನ ಮೇಲ್ಮೈ ಮಾದರಿಗಳನ್ನು ತರಲು ರೆಡಿಯಾಗಿದೆ. ಈ ಕಾರ್ಯಾಚರಣೆ ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಚೀನಾದ ಭವಿಷ್ಯದ ಯೋಜನೆಯಾದ ಮಾನವಸಹಿತ ಚಂದ್ರಯಾನ ಮತ್ತು ವಿಸ್ತೃತ ಬಾಹ್ಯಾಕಾಶ ಪರಿಶೋಧನೆಗೆ ಪ್ರಮುಖ ಅಡಿಪಾಯಹಾಕುತ್ತದೆ ಎಂದು ಪೀ ಹೇಳಿದರು.
48 ಗಂಟೆಗಳಲ್ಲಿ,ಚಂದ್ರನ ಮೇಲ್ಮೈಯಲ್ಲಿ ಕಲ್ಲುಗಳು ಮತ್ತು ಚಂದ್ರನಲ್ಲಿರುವ ಮಣ್ಣನ್ನು ತೆಗೆಯಲು ರೊಬೊಟಿಕ್ ತನ್ನ ರೆಕ್ಕೆಗಳನ್ನು ವಿಸ್ತರಿಸುತ್ತದೆ ಮತ್ತು ಚಂದ್ರನ ಮೇಲ್ಮೈನ ಸುಮಾರು 2 ಕೆಜಿ ಕಲ್ಲು ಮತ್ತು ಮಣ್ಣು ಸಂಗ್ರಹಿಸಿ ಗಗನನೌಕೆಯ ಕಂಟೈನರ್ನಲ್ಲಿ ಹಾಕಿ ಚಾಂಗ್ ಇ-5 ಪ್ರೋಬ್ ಹೊತ್ತು ತರಲಿದೆ ಎಂದು ನಿರೀಕ್ಷಿಸಲಾಗಿದೆ.
ಇದು ಚಂದ್ರನ ಕಕ್ಷೆಗೆ ಪ್ರವೇಶಿಸಿದ ನಂತರ, ಲ್ಯಾಂಡರ್ - ಆರೋಹಣ ಸಂಯೋಜನೆಯು ಆರ್ಬಿಟರ್ - ರಿಟರ್ನರ್ ಸಂಯೋಜನೆಯಿಂದ ಪ್ರತ್ಯೇಕಿಸುತ್ತದೆ. ಆರ್ಬಿಟರ್ - ರಿಟರ್ನರ್ ಚಂದ್ರನ ಮೇಲ್ಮೈಯಿಂದ ಸುಮಾರು 200 ಕಿ.ಮೀ ದೂರದಲ್ಲಿ ಪರಿಭ್ರಮಿಸಿದರೆ, ಲ್ಯಾಂಡರ್ - ಆರೋಹಣವು ಡಿಸೆಂಬರ್ ಆರಂಭದಲ್ಲಿ ಚಂದ್ರನ ಹತ್ತಿರದಲ್ಲಿ, ಓಷಿಯನಸ್ ಪ್ರೊಸೆಲ್ಲಾರಂನ ವಾಯುವ್ಯ ಪ್ರದೇಶವನ್ನು ತಲುಪುತ್ತದೆ. ಇದನ್ನು 'ಓಷನ್ ಆಫ್ ಸ್ಟಾರ್ಮ್ಸ್' ಎಂದೂ ಕರೆಯಲಾಗುತ್ತದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಚಾಂಗ್ -5 ಮಿಷನ್ ಯಶಸ್ವಿಯಾದರೆ, ಚೀನಾದ ಪ್ರಸ್ತುತ ಲೂನಾರ್ ಪರಿಶೋಧನೆ ಯೋಜನೆ ಯಶಸ್ವಿಯಾದಂತೆಯೇ ಎಂದು ಪೀ ತಿಳಿಸಿದ್ದಾರೆ. ಕಡಿಮೆ ಖರ್ಚಿನೊಂದಿಗೆ ಮಾನವರಹಿತ ಚಂದ್ರ ಪರಿಶೋಧನೆಯ ಮೂಲ ತಂತ್ರಜ್ಞಾನಗಳನ್ನು ಚೀನಾ ಪಡೆದುಕೊಳ್ಳುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಪೀ ಯೋಜನೆ ಹಿಂದಿನ ಉದ್ದೇಶವನ್ನ ವಿವರಿಸಿದ್ದಾರೆ. ಚೀನಾದ ಬಾಹ್ಯಕಾಶ ಇತಿಹಾಸದಲ್ಲಿ ಇದನ್ನು ಒಂದು ಮೈಲಿಗಲ್ಲು ಯೋಜನೆ ಎಂದು ಕರೆಯಬಹುದು. ''
.