ETV Bharat / international

ಪಬ್​ ಜಿ ಸೇರಿ ಚೀನಾದ 118 ಆ್ಯಪ್​ ಬ್ಯಾನ್​​: ಚೀನಾದಿಂದ ತೀವ್ರ ವಿರೋಧ - ಚೀನಾ ಮೊಬೈಲ್​ ಆ್ಯಪ್​

ಚೀನಾ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರ ನಿನ್ನೆ 118 ಆ್ಯಪ್​ ಬ್ಯಾನ್​ ಮಾಡಿ ಆದೇಶ ಹೊರಡಿಸಿದ್ದು, ಇದಕ್ಕೆ ಅಲ್ಲಿನ ಸರ್ಕಾರದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

chinese mobile apps
chinese mobile apps
author img

By

Published : Sep 3, 2020, 3:00 PM IST

ಬೀಜಿಂಗ್​​: ಮೊಬೈಲ್​ ಗೇಮ್​​ ಆ್ಯಪ್​​ ಪಬ್​​ ಜಿ ಸೇರಿದಂತೆ 118 ಆ್ಯಪ್​ಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿ ನಿನ್ನೆ ಮಹತ್ವದ ಆದೇಶ ಹೊರಹಾಕಿದೆ. ಇದಕ್ಕೆ ಚೀನಾದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

chinese mobile apps
ಸಾಂದರ್ಭಿಕ ಚಿತ್ರ

ಚೀನಾ ವಾಣಿಜ್ಯ ಸಚಿವ ಜಾಂಗ್​​ ಶಾ ಈ ಕುರಿತು ಮಾತನಾಡಿದ್ದು, ಭಾರತ ತೆಗೆದುಕೊಂಡಿರುವ ನಿರ್ಧಾರಕ್ಕೆ ನಮ್ಮಿಂದ ತೀವ್ರವಾದ ವಿರೋಧವಿದೆ. ಭಾರತ ತೆಗೆದುಕೊಳ್ಳುತ್ತಿರುವ ಕ್ರಮ ನಮ್ಮ ಹೂಡಿಕೆದಾರರು ಮತ್ತು ಪೂರೈಕೆದಾರರ ಕಾನೂನು ಹಿತಾಸಕ್ತಿ ಉಲ್ಲಂಘಿಸುತ್ತಿದೆ ಎಂದಿದ್ದಾರೆ. ಜತೆಗೆ ಭಾರತ ತನ್ನ ತಪ್ಪುಗಳನ್ನ ಸರಿಪಡಿಸಿಕೊಳ್ಳಬೇಕು ಎಂದಿದ್ದಾರೆ.

ಚೀನಾಗೆ ಮತ್ತೊಂದು ಹೊಡೆತ: ಪಬ್​​ಜಿ ಸೇರಿ 118 ಮೊಬೈಲ್ ಆ್ಯಪ್​ ನಿಷೇಧಿಸಿದ ಕೇಂದ್ರ

ಗಡಿಯಲ್ಲಿ ಭಾರತದೊಂದಿಗೆ ಕಾಲು ಕೆದರಿಕೊಂಡು ಜಗಳಕ್ಕೆ ಬರುತ್ತಿರುವ ಚೀನಾ ವಿರುದ್ಧ ಕೇಂದ್ರ ಸರ್ಕಾರ ಈ ಹಿಂದಿನಿಂದಲೂ ಸಮರ ಸಾರಿದ್ದು, ಕಳೆದ ಕೆಲ ದಿನಗಳ ಹಿಂದೆ ಟಿಕ್​ಟಾಕ್​​ ಸೇರಿದಂತೆ 59 ಚೀನಾ ಆ್ಯಪ್​​ ಬ್ಯಾನ್​ ಮಾಡಿತ್ತು. ಇದಾದ ಬಳಿಕ ಮತ್ತೊಮ್ಮೆ ಅಂತಹದ್ದೇ ಮತ್ತೊಂದು ನಿರ್ಧಾರಕ್ಕೆ ಕೈಹಾಕಿ ಡ್ರ್ಯಾಗನ್​ ರಾಷ್ಟ್ರದ 47 ಆಪ್ಲಿಕೇಶನ್​ಗಳ ಮೇಲೆ ನಿಷೇಧ ಹೇರಿತ್ತು. ನಿನ್ನೆ ಕೂಡ 118 ಆ್ಯಪ್​ ಬ್ಯಾನ್​ ಮಾಡಿದೆ.

ಕೇಂದ್ರ ಸರ್ಕಾರ ಚೀನಾದ ಒಟ್ಟು 275 ಅಪ್ಲಿಕೇಶನ್​ಗಳ ಮೇಲೆ ನಿಗಾ ಇಡಲಾಗಿದ್ದು, ದೇಶದ ಭದ್ರತೆ, ಮಾಹಿತಿ ಸೋರಿಕೆ, ಗೌಪ್ಯತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಅವುಗಳ ಪರಿಶೀಲನೆ ನಡೆಸಿ ಈ ನಿರ್ಧಾರ ಕೈಗೊಳ್ಳುತ್ತಿದೆ. ಕೈಗೊಳ್ಳಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.