ಒಮಿಕ್ರಾನ್ನ ಮೊದಲ ಸಮುದಾಯ ಹರಡುವಿಕೆ ವರದಿ: ಚೀನಾದಲ್ಲಿ ಇಬ್ಬರಿಗೆ ಪಾಸಿಟಿವ್ - ಚೀನಾದಲ್ಲಿ ಒಮಿಕ್ರಾನ್ನ ಮೊದಲ ಸಮುದಾಯ ಹರಡುವಿಕೆ ವರದಿ
ಸಮುದಾಯ ಸೋಂಕಿಗೆ 10 ವರ್ಷದ ವಿದ್ಯಾರ್ಥಿ ಮತ್ತು ಸಿಬ್ಬಂದಿ ಸದಸ್ಯರಾಗಿದ್ದಾರೆ, ಅವರು 29 ವರ್ಷ ವಯಸ್ಸಿನ ಮಹಿಳೆಯಾಗಿದ್ದು, ಇವರು ಕಳೆದ 14 ದಿನಗಳಲ್ಲಿ ನಗರದಿಂದ ಹೊರಗೆ ಪ್ರಯಾಣಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಟಿಯಾಂಜಿನ್: ಕೋವಿಡ್-19 ರೂಪಾಂತರ ಒಮಿಕ್ರಾನ್ನ ಮೊದಲ ಸಮುದಾಯ ಹರಡುವಿಕೆಯನ್ನು ಚೀನಾ ವರದಿ ಮಾಡಿದೆ. ಟಿಯಾಂಜಿನ್ ನಗರದಲ್ಲಿ ಇಬ್ಬರಿಗೆ ಪಾಸಿಟಿವ್ ದೃಢಪಟ್ಟಿದೆ. ಪರಿಣಾಮ ಪೋರ್ಟ್ ಸಿಟಿ ಟಿಯಾಂಜಿನ್ ನಲ್ಲಿ ಜನವರಿ 9 ರಂದು ತನ್ನ 14 ಮಿಲಿಯನ್ ನಿವಾಸಿಗಳನ್ನು ಸಾಮೂಹಿಕವಾಗಿ ಪರೀಕ್ಷಿಸಲು ಮುಂದಾಗಿದೆ.
ಇನ್ನು ಒಮಿಕ್ರಾನ್ ಪ್ರಕರಣಗಳು ಬೀಜಿಂಗ್‌ನ ಗಡಿಯಲ್ಲಿರುವ ಟಿಯಾಂಜಿನ್‌ನಲ್ಲಿರುವ ಶಾಲೆಯ ಬಳಿ ಇರುವ ಆರೈಕೆ ಕೇಂದ್ರದಲ್ಲಿ 20 ಮಕ್ಕಳು ಮತ್ತು ವಯಸ್ಕರ ಗುಂಪಿನಲ್ಲಿ ಕಂಡು ಬಂದಿದೆ. ಫೆಬ್ರವರಿ 4 ರಂದು ಚಳಿಗಾಲದ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಸಿದ್ಧವಾಗುತ್ತಿರುವ ಬೀಜಿಂಗ್ ನಗರಕ್ಕೆ ಪ್ರವೇಶಿಸುವ ಯಾರೇ ಆದರೂ ಕೊರೊನಾ ಪರೀಕ್ಷೆಗೆ ಒಳಗಾಗುವುದನ್ನು ಕಡ್ಡಾಯಗೊಳಿಸುವ ಹಾಗೂ ಕೆಲವು ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿಗೆ ಬರುವ ವ್ಯಕ್ತಿಗಳು ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿರುವುದನ್ನು ರಾಷ್ಟ್ರ ದೃಢಪಡಿಸಿಕೊಳ್ಳುತ್ತಿದೆ.
ಇದನ್ನೂ ಓದಿ: ಚೀನಾದೊಂದಿಗಿನ ಗಡಿ ವಿವಾದದಲ್ಲಿ ಅಮೆರಿಕ ಭಾರತದ ಪರ ನಿಲ್ಲುತ್ತದೆ: ಶ್ವೇತಭವನ
ಉತ್ತರ ಚೀನಾದ ಶಾಂಕ್ಸಿಯ ಪ್ರಾಂತೀಯ ರಾಜಧಾನಿಯಾದ ಕ್ಸಿಯಾನ್ನಲ್ಲಿ ಇತ್ತೀಚಿನ 1,900 ಕ್ಕೂ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ. ಪ್ರಕಟಣೆಯ ಪ್ರಕಾರ 13 ಮಿಲಿಯನ್ ಜನರಿರುವ ಈ ನಗರ ವಾರಗಳವರೆಗೆ ಕಟ್ಟುನಿಟ್ಟಾದ ಲಾಕ್‌ಡೌನ್‌ನಲ್ಲಿದೆ. ಇನ್ನು 56 ಹೆನಾನ್‌ನಿಂದ, 30 ಶಾಂಕ್ಸಿಯಿಂದ, ಮೂರು ಟಿಯಾಂಜಿನ್‌ನಲ್ಲಿ, ಎರಡು ಆಗ್ನೇಯ ಚೀನಾದ ಝೆಜಿಯಾಂಗ್‌ನಲ್ಲಿ ಮತ್ತು ದಕ್ಷಿಣದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಒಂದು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.