ETV Bharat / international

ಕೊರೊನಾ ವೈರಸ್​: ಮತ್ತೆ ಸಾವಿನ ಮನೆ ಸೇರಿದ 35 ಮಂದಿ; ಇಲ್ಲಿವರೆಗೆ 2,870 ಮಂದಿ ಬಲಿ!

ಕೊರೊನಾ ವೈರಸ್​ಗೆ ತುತ್ತಾಗಿ ಚೀನಾದಲ್ಲಿ ಮತ್ತೆ 35 ಜನ ಸಾವನ್ನಪ್ಪಿದ್ದು, ಇದುವರೆಗೆ ದಾಖಲಾದ ಒಟ್ಟು ಸಾವಿನ ಸಂಖ್ಯೆ 2,870!

China reports 35 more Coronavirus deaths
ಕೊರೋನಾ ವೈರಸ್​: ಇಂದು 35 ಸಾವಿನ ಪ್ರಕರಣಗಳು ವರದಿ
author img

By

Published : Mar 1, 2020, 11:23 AM IST

Updated : Mar 1, 2020, 11:50 AM IST

ಬೀಜಿಂಗ್​: ಕೊರೊನಾ ವೈರಸ್​ಗೆ ತುತ್ತಾಗಿ ಚೀನಾದಲ್ಲಿ ಮತ್ತೆ 35 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 2,870 ಕ್ಕೆ ತಲುಪಿದೆ.

ಶನಿವಾರದಂದು 47 ಮಂದಿ ಮಾರಕ ವೈರಸ್‌ಗೆ ಬಲಿಯಾಗಿದ್ದು ಸಾವಿನ ಸಂಖ್ಯೆ ಕೊಂಚ ಇಳಿಮುಖವಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಆರೋಗ್ಯ ಆಯೋಗವು 573 ಹೊಸ ಸೋಂಕು ಪ್ರಕರಣಗಳನ್ನು ವರದಿ ಮಾಡಿದ್ದು, ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 79,824 ಕ್ಕೆ ತಲುಪಿದೆ. ಈವರೆಗೆ ವರದಿಯಾಗುತ್ತಿದ್ದ ಸಾವಿನ ಪ್ರಕರಣಗಳು ಮತ್ತು ವೈರಸ್​ ಸೋಂಕು ಪ್ರಕರಣಗಳನ್ನು ಗಮನಿಸಿದರೆ, ಕಳೆದ ಕೆಲ ದಿನಗಳಿಂದ ಸಾವುನೋವಿನ ಸಂಖ್ಯೆ ಕಡಿಮೆಯಾಗುತ್ತಿದೆ.

ಸದ್ಯ ವೈರಸ್​ ತಡೆಯಲು ಚೀನದಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ನಿಧಾನಗತಿಯಲ್ಲಿ ಈ ಪ್ರಯತ್ನ ಪ್ರಗತಿ ಸಾಧಿಸುತ್ತಿದೆಯೆಂದು ಅಲ್ಲಿನ ಆಧಿಕಾರಿಗಳು ಹೇಳುತ್ತಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಮೊದಲ ಸಾವು:

78 ವರ್ಷದ ವ್ಯಕ್ತಿಯೊಬ್ಬರು ಈ ಕೊರೊನಾ ವೃರಸ್​ಗೆ ತುತ್ತಾಗಿದ್ದು, ಇಂದು ಪರ್ತ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Last Updated : Mar 1, 2020, 11:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.