ETV Bharat / international

ಚೀನಾ ನಮ್ಮ ಅತ್ಯಂತ ಪ್ರಮುಖ ಪಾಲುದಾರ: ತಾಲಿಬಾನ್ ಹೀಗೆ ಹೇಳಿದ್ದೇಕೆ?

ಚೀನಾ ಕೂಡಾ ತಾಲಿಬಾನ್ ಕುರಿತಂತೆ ಸಕಾರಾತ್ಮಕ ಹೇಳಿಕೆಗಳನ್ನು ನೀಡುತ್ತಿದೆ. ಎರಡೂ ದೇಶಗಳು ಪರಸ್ಪರ ವಿದೇಶಿ ನೀತಿಗಳನ್ನು ಗೌರವಿಸುವುದು ಮತ್ತು ಪರಸ್ಪರ ಉತ್ತಮ ಸಂಬಂಧ ಹೊಂದುವ ಆಶಯವನ್ನೂ ವ್ಯಕ್ತಪಡಿಸಿದೆ.

China is our most important partner, says Taliban
ಚೀನಾ ನಮ್ಮ ಅತ್ಯಂತ ಪ್ರಮುಖ ಪಾಲುದಾರ: ತಾಲಿಬಾನ್ ಹೀಗೆ ಹೇಳಿದ್ದೇಕೆ?
author img

By

Published : Sep 3, 2021, 7:38 PM IST

ಕಾಬೂಲ್(ಅಫ್ಘಾನಿಸ್ತಾನ): ಜಗತ್ತಿನ ಬಹುತೇಕ ರಾಷ್ಟ್ರಗಳು ಅಫ್ಘಾನಿಸ್ತಾನದತ್ತ ರಾಜಕೀಯ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿವೆ. ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಚೀನಾ ನಮ್ಮ ಅತ್ಯಂತ ಮುಖ್ಯ ಪಾಲುದಾರ ಎಂದು ಹೇಳಿದ್ದು, ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ.

ದೇಶವನ್ನು ಪುನರ್ನಿಮಿಸಲು, ಹಸಿವು ತೊಡೆದು ಹಾಕಲು ಮತ್ತು ಆರ್ಥಿಕತೆಯ ಪುನಶ್ಚೇತನಕ್ಕಾಗಿ ಅಫ್ಘಾನಿಸ್ತಾನದಲ್ಲಿರುವ ತಾಮ್ರದ ನಿಕ್ಷೇಪಗಳನ್ನು ಚೀನಾ ಬಳಸಿಕೊಳ್ಳಲು ಎದುರುನೋಡುತ್ತಿದೆ ಎಂದು ಹೇಳಲಾಗುತ್ತಿದೆ.

ಚೀನಾವನ್ನು ಆಫ್ರಿಕಾ, ಏಷ್ಯಾ ಮತ್ತು ಯುರೋಪಿನೊಂದಿಗೆ ಸಂಪರ್ಕಿಸುವ, ಅದರಲ್ಲೂ ಬಂದರುಗಳು, ರೈಲ್ವೆ, ರಸ್ತೆಗಳು ಮತ್ತು ಕೈಗಾರಿಕೆಗಳಿಗೆ ಸಂಪರ್ಕಿಸುವ ಚೀನಾದ ಒಂದು ಬೆಲ್ಟ್-ಒನ್ ರೋಡ್ ಯೋಜನೆಗೆ ಅಫ್ಘಾನಿಸ್ತಾನದ ಬೆಂಬಲವಿದೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.

ಚೀನಾ ನಮ್ಮ ಪ್ರಮುಖ ಪಾಲುದಾರನಾಗಿದ್ದು, ನಮಗೆ ಇದೊಂದು ಉತ್ತಮ ಅವಕಾಶವಾಗಿದೆ. ಏಕೆಂದರೆ ದೇಶದಲ್ಲಿ ಹೂಡಿಕೆ ಮಾಡಲು ಮತ್ತು ದೇಶವನ್ನು ಪುನರ್ನಿಮಾಣ ಮಾಡಲು ಚೀನಾ ಸಿದ್ಧವಾಗಿದೆ ಎಂದು ಇಟಾಲಿಯನ್ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ದೇಶದಲ್ಲಿ ಶ್ರೀಮಂತ ತಾಮ್ರದ ಗಣಿಗಳಿವೆ. ಚೀನಿಯರು ಅವುಗಳನ್ನು ಹೊರತೆಗೆಯಬಹುದು ಮತ್ತು ಆಧುನೀಕರಿಸಬಹುದು. ಇದರ ಜೊತೆಗೆ, ಪ್ರಪಂಚದಾದ್ಯಂತದ ಮಾರುಕಟ್ಟೆಗಳಿಗೆ ನಾವು ವಿಸ್ತರಿಸಿಕೊಳ್ಳಲು ಚೀನಾ ನಮಗೆ ಪಾಸ್ ಇದ್ದಹಾಗೆ ಎಂದಿದ್ದಾರೆ.

ಚೀನಾ ಕೂಡಾ ತಾಲಿಬಾನ್ ಕುರಿತಂತೆ ಸಕಾರಾತ್ಮಕ ಹೇಳಿಕೆಗಳನ್ನು ನೀಡುತ್ತಿದೆ. ಎರಡೂ ದೇಶಗಳು ಪರಸ್ಪರ ವಿದೇಶಿ ನೀತಿಗಳನ್ನು ಗೌರವಿಸುವುದು ಮತ್ತು ಪರಸ್ಪರ ಉತ್ತಮ ಸಂಬಂಧ ಹೊಂದುವ ಆಶಯವನ್ನೂ ವ್ಯಕ್ತಪಡಿಸಿದೆ.

ಮಂಗಳವಾರ ಅಫ್ಘಾನಿಸ್ತಾನದ ಸಾರ್ವಭೌಮತ್ವವನ್ನು ಚೀನಾ ಗೌರವಿಸುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದು, ಆರ್ಥಿಕ ಅಭಿವೃದ್ಧಿಯನ್ನು ಅರಿತುಕೊಳ್ಳಲು ನಮಗೆ ಮುಕ್ತ ರಾಜಕೀಯ ವ್ಯವಸ್ಥೆ, ಎಲ್ಲಾ ರೀತಿಯ ಭಯೋತ್ಪಾದಕ ಗುಂಪುಗಳಿಂದ ಸಹಕಾರದ ಅವಶ್ಯಕತೆಯಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಇಡಾ ಚಂಡಮಾರುತದ ಆರ್ಭಟಕ್ಕೆ ನಲುಗಿದ ಅಮೆರಿಕ.. ಕನಿಷ್ಠ 45 ಮಂದಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.