ಬೀಜಿಂಗ್: ಚೀನಾದ ಮೊದಲ 3ನೇ ತಲೆಮಾರಿನ ಹುವಲಾಂಗ್ ಒನ್ ಪರಮಾಣು ವಿದ್ಯುತ್ ಸ್ಥಾವರ ಘಟಕವು ವಾಣಿಜ್ಯ ಕಾರ್ಯಾಚರಣೆಗೆ ಸಿದ್ಧಗೊಂಡಿದ್ದು, ತನ್ನ ಕಾರ್ಯ ಆರಂಭಿಸಿದೆ ಎಂದು ಚೀನಾದ ನ್ಯಾಷನಲ್ ನ್ಯೂಕ್ಲಿಯರ್ ಕಾರ್ಪ್ ತಿಳಿಸಿದೆ.
ಚೀನಾದ ಆಗ್ನೇಯ ಫುಜಿಯಾನ್ ಪ್ರಾಂತ್ಯದ ಫುಕಿಂಗ್ ನಗರದಲ್ಲಿರುವ ರಿಯಾಕ್ಟರ್ 60 ವರ್ಷಗಳ ಜೀವಿತಾವಧಿ ಹೊಂದಿದೆ. ಅಲ್ಲದೇ ಇದರ ಪ್ರಮುಖ ಅಂಶಗಳು ದೇಶಿಯವಾಗಿಯೇ ನಿರ್ಮಿಸಲ್ಪಟ್ಟಿವೆ.
ಪರಮಾಣು ಸ್ಥಾವರ ಹೊಂದಿರುವ ಅಮೆರಿಕ, ಫ್ರಾನ್ಸ್ ಮತ್ತು ರಷ್ಯಾದಂತಹ ದೇಶಗಳ ಜೊತೆ ಚೀನಾವು ಈಗ ವಿಶ್ವದ 3ನೇ ತಲೆಮಾರಿನ ಪರಮಾಣು ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ.
ಈ ವರ್ಷದ ಅಂತ್ಯದಲ್ಲಿ 2ನೇ ಹುವಲಾಂಗ್ ರಿಯಾಕ್ಟರ್ ಸ್ಥಾಪನೆಯಾಗಲಿದ್ದು, ಈ ಘಟಕಗಳು ಅತ್ಯಂತ ಕಡಿಮೆ ಕಾರ್ಬನ್ ಹೊರಸೂಸುವ ಸ್ಥಾವರಗಳಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಎಪಿಕ್ ಗೇಮ್ಸ್ ಸ್ಟೋರ್; ಕಳೆದ ವರ್ಷ ಇಷ್ಟೊಂದು ಫ್ರೀ ಗೇಮ್ಸ್ ಪಡೆದ ಆಟಗಾರರು!!