ETV Bharat / international

ಮೃತ ಸೈನಿಕರ ಬಗ್ಗೆ ಚೀನಾ ಗೌಪ್ಯತೆ: ಚೀನಿ ಸರ್ಕಾರದ ವಿರುದ್ಧ ಯೋಧರ ಕುಟುಂಬಸ್ಥರು ಕಿಡಿ - ಭಾರತ ಚೀನಾ ಗಡಿ ಬಿಕ್ಕಟ್ಟು

ಗಾಲ್ವನ್ ಸಂಘರ್ಷದಲ್ಲಿ ಮೃತರಾದ ಸೈನಿಕರ ಬಗ್ಗೆ ಚೀನಾ ಸರ್ಕಾರ ಗೌಪ್ಯತೆ ಕಾಪಾಡಿಕೊಂಡಿದ್ದು, ಈ ಬಗ್ಗೆ ಸೈನಿಕರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

soldiers killed in Galwan face-off
ಚೀನಿ ಸರ್ಕಾರದ ವಿರುದ್ಧ ಯೋಧರ ಕುಟುಂಸ್ಥರು ಕಿಡಿ
author img

By

Published : Jun 28, 2020, 3:40 PM IST

ವಾಷಿಂಗ್ಟನ್: ಗಾಲ್ವನ್ ಕಣಿವೆ ಪ್ರದೇಶದಲ್ಲಿ ಭಾರತದೊಂದಿಗೆ ನಡೆದ ಸಂಘರ್ಷದಲ್ಲಿ ಅನೇಕ ಸಾವುನೋವುಗಳನ್ನು ಅನುಭವಿಸಿದ್ದರೂ, ಘಟನೆಯಲ್ಲಿ ಚೀನಾ ತನ್ನ ಎಷ್ಟು ಸೈನಿಕರು ಸಾವಿಗೀಡಾಗಿದ್ದಾರೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.

ಚೀನಿ ಕಮ್ಯುನಿಸ್ಟ್ ಪಕ್ಷದ ಈ ನಿರ್ಧಾರವು ಘಟನೆಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಸೈನಿಕರ ಕುಟುಂಬಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಅಮೆರಿಕ ಮೂಲದ ಪತ್ರಿಕೆ ವರದಿ ಮಾಡಿದೆ.

ಚೀನಾ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಸೈನಿಕರ ಕುಟುಂಬಸ್ಥರು ವಿಬೋ ಸೇರಿದಂತೆ ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಆಕ್ರೋಶವನ್ನು ಕಡಿಮೆ ಮಾಡಲು ಚೀನಾ ಸರ್ಕಾರ ಹೆಣಗಾಡುತ್ತಿದೆ ಎಂದು ಅಮೆರಿಕ ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.

ಜೂನ್ 15 ರಂದು ಸಂಘರ್ಷ ನಡೆದ ನಂತರ, ಚೀನಾದ ಸೈನ್ಯದೊಂದಿಗೆ ನಡೆದ ಘರ್ಷಣೆಯಲ್ಲಿ 20 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಭಾರತ ತಿಳಿಸಿತ್ತು. ಆದರೆ ಚೀನಾ ಮಾತ್ರ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.