ಬೀಜಿಂಗ್ : ಸೈದ್ಧಾಂತಿಕ ಪೂರ್ವಾಗ್ರಹ ಮತ್ತು ಸ್ವಾರ್ಥ ರಾಜಕೀಯ ಹಿತಾಸಕ್ತಿಯಿಂದ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಬೀಜಿಂಗ್ ( ಚೀನಾ) ವಿರುದ್ಧ ಎಲ್ಲಾ ರೀತಿಯ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಆರೋಪಿಸಿದೆ.
'ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದಿಂದ ಧಾರ್ಮಿಕ ಸ್ವಾತಂತ್ರ್ಯದ ಭವಿಷ್ಯಕ್ಕೆ ದೊಡ್ಡ ಗಂಡಾತರವಿದೆ' ಎಂದು ವಿಯೆಟ್ನಾಂ ಭೇಟಿಯ ವೇಳೆ ಪೊಂಪಿಯೊ ಹೇಳಿದ್ದರು. ಅಲ್ಲದೇ, ಈ ವಾರದಲ್ಲಿ ಏಷ್ಯಾದ ಐದು ರಾಷ್ಟ್ರಗಳಲ್ಲಿ ಪ್ರವಾಸ ಕೈಗೊಂಡಾಗಲೂ ಚೀನಾ ವಿರೋಧಿ ಹೇಳಿಕೆಗಳನ್ನು ನೀಡಿದ್ದರು.
ಈ ನಡುವೆ ತಾನು ಜಯಗಳಿಸಿದರೆ ಚೀನಾ - ಯುಎಸ್ ವ್ಯಾಪಾರ ಸಂಬಂಧಗಳ ಬಗ್ಗೆ ಯುಎಸ್ ಮಿತ್ರರಾಷ್ಟ್ರಗಳಿಂದ ಸಲಹೆ ಪಡೆಯುವುದಾಗಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್ ಹೇಳಿದ್ದರು. ಅಲ್ಲದೇ, ಯುಎಸ್ನೊಂದಿಗಿನ ಚೀನಾದ ಸಂಬಂಧ ಸಂಘರ್ಷ ರಹಿತವಾದದ್ದು ಎಂದಿದ್ದರು.
ಇನ್ನು, ಚೀನಾ ಪರ ಏಜೆಂಟರಾಗಿ ಕಾರ್ಯನಿರ್ವಹಿಸಲು ಸಂಚು ರೂಪಿಸಿದ ಆರೋಪದಡಿ ಯುಎಸ್ ಪೊಲೀಸರಿಂದ ಬಂಧಿಸಲ್ಪಟ್ಟವರಲ್ಲಿ ಚೀನಾದ ಯಾವುದೇ ಅಧಿಕಾರಿಗಳು ಇರಲಿಲ್ಲ ಎಂದು ಪೊಂಪಿಯೋ ಹೇಳಿದ್ದಾರೆ.