ETV Bharat / international

ಕೋವಿಡ್: ಚೀನಾದ ಕಡೆಯಿಂದ ಮೌಂಟ್ ಎವರೆಸ್ಟ್ ಪರ್ವತಾರೋಹಣ ರದ್ದು..!

ನೇಪಾಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಚೀನಾ ತನ್ನ ದಿಕ್ಕಿನಿಂದ ಬರುವವರಿಗೆ ಮೌಂಟ್ ಎವರೆಸ್ಟ್​​​ ಏರುವ ಪ್ರಯತ್ನ ರದ್ದುಗೊಳಿಸಿದೆ. ಈ ಋತುವಿನಲ್ಲಿ ಚೀನಾ ತನ್ನ ದಿಕ್ಕಿನಿಂದ ಮೌಂಟ್ ಎವರೆಸ್ಟ್ ಏರಲು ಕೇವಲ 38 ಜನರಿಗೆ ಅನುಮತಿ ನೀಡಿತ್ತು. ಆದರೆ, ನೇಪಾಳ 408 ಜನರಿಗೆ ಅವಕಾಶ ಕೊಟ್ಟಿತ್ತು.

ಕೋವಿಡ್:
ಕೋವಿಡ್:
author img

By

Published : May 15, 2021, 3:35 PM IST

ಬೀಜಿಂಗ್: ನೆರೆಯ ನೇಪಾಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಚೀನಾ ತನ್ನ ದಿಕ್ಕಿನಿಂದ ಬರುವವರಿಗೆ ಮೌಂಟ್ ಎವರೆಸ್ಟ್​​​ ಏರುವ ಪ್ರಯತ್ನವನ್ನು ರದ್ದುಗೊಳಿಸಿದೆ.

ಈ ಬಗ್ಗೆ ಚೀನಾದ ಕ್ರೀಡಾ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ವೈರಸ್ ಹರಡದಂತೆ ಚೀನಾ ಇಂತಹ ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಅತ್ತ ನೇಪಾಳದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ.

ಈ ಋತುವಿನಲ್ಲಿ ಚೀನಾ ತನ್ನ ದಿಕ್ಕಿನಿಂದ ಮೌಂಟ್ ಎವರೆಸ್ಟ್ ಏರಲು ಕೇವಲ 38 ಜನರಿಗೆ ಅನುಮತಿ ನೀಡಿತ್ತು. ಆದರೆ, ನೇಪಾಳ 408 ಜನರಿಗೆ ಅವಕಾಶ ಕೊಟ್ಟಿತ್ತು. ಕಳೆದ ವರ್ಷ ಸಾಂಕ್ರಾಮಿಕದಿಂದಾಗಿ ಎರಡೂ ದೇಶಗಳು ಎವರೆಸ್ಟ್ ಪರ್ವತಾರೋಹಣವನ್ನು ರದ್ದುಗೊಳಿಸಿದ್ದವು.

ಇದನ್ನೂ ಓದಿ:ಚೀನಾದಲ್ಲಿ ಬಿರುಗಾಳಿ ಅಬ್ಬರ.. 7 ಸಾವು, 230 ಮಂದಿಗೆ ಗಾಯ

ನೇಪಾಳದ ಕಡೆಯಿಂದ ಎವರೆಸ್ಟ್ ಏರಲು ಬಂದಿದ್ದ ಕೆಲವರಿಗೆ ಕೋವಿಡ್ ದೃಢಪಟ್ಟಿತ್ತು. ಇತ್ತೀಚೆಗೆ ಪರ್ವತಾರೋಹಣ ಮಾಡುತ್ತಿದ್ದ ಸ್ವಿಸ್ ಮತ್ತು ಅಮೆರಿಕನ್ ಪ್ರಜೆಗಳು ಮೃತಪಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.