ದುಬೈ/ಹೈದರಾಬಾದ್: ನಿನ್ನೆ ಬಾಲಿವುಡ್ ಕಿಂಗ್ ಶಾರುಖ್ ಖಾನ್ 54ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನಕ್ಕೆ ವಿಶ್ವದ ಅತಿ ಎತ್ತರದ ಕಟ್ಟಡ, ದುಬೈನ ಬುರ್ಜ್ ಖಲೀಫಾ ವಿಭಿನ್ನವಾಗಿ ಶಾರುಖ್ಗೆ ವಿಶ್ ಮಾಡಿದೆ.
'Happy Birthday... To the King of Bollywood' ಅಂತಾ ಜಗತ್ತಿನ ಅತಿ ದೊಡ್ಡ ಕಟ್ಟಡದ ಮೇಲೆ ದೊಡ್ಡ ಅಕ್ಷರಗಳಲ್ಲಿ ವರ್ಣರಂಜಿತ ಬೆಳಕಿನಿಂದ ಬರೆದು ಶಾರುಖ್ ಖಾನ್ಗೆ ವಿಶ್ ಮಾಡಲಾಗಿದೆ. ಈ ಅಪೂರ್ವ ಕ್ಷಣವನ್ನು ದುಬೈನಲ್ಲಿರುವ ಶಾರುಖ್ ಅಭಿಮಾನಿಗಳು ಎಂಜಾಯ್ ಮಾಡಿದ್ದಾರೆ.
-
To my brother, the awesomely cool Mr. @Mohamed_Alabbar and @BurjKhalifa @emaardubai. Thanks for making me shine so bright. Your love and kindness is unsurpassable. Wow! This is really the Tallest I have ever been. Love u Dubai. It’s my birthday and I’m the guest! pic.twitter.com/8oFAQCqNbD
— Shah Rukh Khan (@iamsrk) November 2, 2019 " class="align-text-top noRightClick twitterSection" data="
">To my brother, the awesomely cool Mr. @Mohamed_Alabbar and @BurjKhalifa @emaardubai. Thanks for making me shine so bright. Your love and kindness is unsurpassable. Wow! This is really the Tallest I have ever been. Love u Dubai. It’s my birthday and I’m the guest! pic.twitter.com/8oFAQCqNbD
— Shah Rukh Khan (@iamsrk) November 2, 2019To my brother, the awesomely cool Mr. @Mohamed_Alabbar and @BurjKhalifa @emaardubai. Thanks for making me shine so bright. Your love and kindness is unsurpassable. Wow! This is really the Tallest I have ever been. Love u Dubai. It’s my birthday and I’m the guest! pic.twitter.com/8oFAQCqNbD
— Shah Rukh Khan (@iamsrk) November 2, 2019
ಈ ವಿಡಿಯೋವನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿರೋ ಶಾರುಖ್, "ನನ್ನನ್ನು ಪ್ರಕಾಶಮಾನವಾಗಿ ಬೆಳಗಿಸಿದ್ದಕ್ಕಾಗಿ ನನ್ನ ಸಹೋದರ, ಮೊಹಮ್ಮದ್ ಅಲಾಬ್ಬರ್ ಮತ್ತು ಬುರ್ಜ್ ಖಲೀಫಾಗೆ ಧನ್ಯವಾದಗಳು. ನಿಮ್ಮ ಪ್ರೀತಿಯನ್ನು ಮೀರಿಸಲಾಗದು. ಇದು ನಿಜಕ್ಕೂ ಅದ್ಭುತ! ಲವ್ ಯು ದುಬೈ. ಇದು ನನ್ನ ಜನ್ಮದಿನ ಮತ್ತು ನಾನೇ ಅತಿಥಿ" ಎಂದು ಬರೆದುಕೊಂಡಿದ್ದಾರೆ.
ಇನ್ನು, ಬುರ್ಜ್ ಖಲಿಫಾ ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವುದು ಶಾರುಖ್ ಗೌರವವನ್ನು ಇನ್ನಷ್ಟು ಹೆಚ್ಚಿಸಿದೆ. ಜಗತ್ತಿನ ವಿಶೇಷ ದಿನಗಳಂದು ಮಾತ್ರವೇ ಅಪರೂಪವೆಂಬಂತೆ ಬುರ್ಜ್ ಖಲೀಫಾದಲ್ಲಿ ಧ್ವನಿ ಹಾಗೂ ಬೆಳಕಿನಾಟವನ್ನು ಕಾಣಬಹುದು. ಅದು ಶಾರುಖ್ ಖಾನ್ ಹುಟ್ಟು ಹಬ್ಬಕ್ಕೂ ಮಾಡಿರುವುದು ಜಗತ್ತಿನ ಹುಬ್ಬೇರಿಸುವಂತೆ ಮಾಡಿದೆ.