ETV Bharat / international

ಕಾಬೂಲ್​ನ ಮಸೀದಿ ಮೇಲೆ ಬಾಂಬ್ ದಾಳಿ : ಹಲವು ನಾಗರಿಕರು ಸಾವು - ಬಾಂಬ್ ಸ್ಫೋಟ

ಕಾಬೂಲ್‌ನಲ್ಲಿ ಇಟಾಲಿಯನ್ ಅನುದಾನಿತ ಆಸ್ಪತ್ರೆಯಾದ ಎಮರ್ಜೆನ್ಸಿ ಎನ್​​ಜಿಒ ಸ್ಫೋಟದಲ್ಲಿ ಗಾಯಗೊಂಡ ನಾಲ್ಕು ಜನರನ್ನು ದಾಖಲಿಸಿಕೊಂಡಿರುವುದಾಗಿ ಟ್ವೀಟ್ ಮಾಡಿದೆ. ಮಸೀದಿಯ ಸುತ್ತಮುತ್ತಲಿನ ಪ್ರದೇಶವನ್ನು ತಾಲಿಬಾನ್‌ಗಳು ಸುತ್ತುವರಿದಿದ್ದಾರೆ. ದಾಳಿಯ ಹೊಣೆಯನ್ನು ತಕ್ಷಣಕ್ಕೆ ಯಾರೂ ಹೊತ್ತುಕೊಂಡಿಲ್ಲ..

Bomb
ಬಾಂಬ್ ಸ್ಫೋಟ
author img

By

Published : Oct 3, 2021, 7:49 PM IST

ಕಾಬೂಲ್​(ಅಫ್ಘಾನಿಸ್ತಾನ) : ಅಫ್ಘಾನ್ ರಾಜಧಾನಿ ಕಾಬೂಲ್​​ನ ಮಸೀದಿಯ ಪ್ರವೇಶದ್ವಾರದಲ್ಲಿ ಭಾನುವಾರ ಬಾಂಬ್ ಸ್ಫೋಟಗೊಂಡಿದ್ದು, "ಹಲವಾರು ನಾಗರಿಕರು ಮೃತಪಟ್ಟಿದ್ದಾರೆ" ಎಂದು ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ.

ಕಾಬೂಲ್‌ನ ವಿಸ್ತಾರವಾದ ಈದ್ಗಾ ಮಸೀದಿಯನ್ನು ಗುರಿಯಾಗಿಸಿಕೊಂಡು ಬಾಂಬ್​ ದಾಳಿ ನಡೆಸಲಾಗಿದೆ. ಈ ವೇಳೆ ಅಲ್ಲಿ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರ ತಾಯಿಯ ಸ್ಮಾರಕ ಸೇವೆ ನಡೆಯುತ್ತಿತ್ತು. ಈ ದಾಳಿಯು ನಾಗರಿಕರ ಜೀವವನ್ನು ಬಲಿ ತೆಗೆದುಕೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.

ದಾಳಿಯಲ್ಲಿ ತಾಲಿಬಾನ್ ಹೋರಾಟಗಾರರಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಾಲಿಬಾನ್ ವಕ್ತಾರ ಬಿಲಾಲ್ ಕರಿಮಿ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ. ದಾಳಿಯಲ್ಲಿ ಸಾವನ್ನಪ್ಪಿದವರು ಮಸೀದಿ ಗೇಟ್‌ನ ಹೊರಗಿನ ನಾಗರಿಕರು. ಸತ್ತವರ ಅಂಕಿ-ಅಂಶದ ಕುರಿತು ಮಾಹಿತಿ ನೀಡಿಲ್ಲ, ತನಿಖೆ ನಡೆಯುತ್ತಿದೆ ಎಂದರು.

ಕಾಬೂಲ್‌ನಲ್ಲಿ ಇಟಾಲಿಯನ್ ಅನುದಾನಿತ ಆಸ್ಪತ್ರೆಯಾದ ಎಮರ್ಜೆನ್ಸಿ ಎನ್​​ಜಿಒ ಸ್ಫೋಟದಲ್ಲಿ ಗಾಯಗೊಂಡ ನಾಲ್ಕು ಜನರನ್ನು ದಾಖಲಿಸಿಕೊಂಡಿರುವುದಾಗಿ ಟ್ವೀಟ್ ಮಾಡಿದೆ. ಮಸೀದಿಯ ಸುತ್ತಮುತ್ತಲಿನ ಪ್ರದೇಶವನ್ನು ತಾಲಿಬಾನ್‌ಗಳು ಸುತ್ತುವರಿದಿದ್ದಾರೆ. ದಾಳಿಯ ಹೊಣೆಯನ್ನು ತಕ್ಷಣಕ್ಕೆ ಯಾರೂ ಹೊತ್ತುಕೊಂಡಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.