ಕಾಬೂಲ್: ಅಫ್ಘಾನಿಸ್ತಾನದ ಅಧ್ಯಕ್ಷರಾಗಿ ಅಶ್ರಫ್ ಘನಿ ಅವರು ಪ್ರಮಾಣ ವಚನ ಸ್ವೀಕರಿಸುವಾಗ ಎರಡು ಬಾಂಬ್ ಸ್ಫೋಟಗೊಂಡಿದ್ದು, ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಅಶ್ರಫ್ ಘನಿ ಇಂದು ಎರಡನೇ ಬಾರಿಗೆ ಅಫ್ಘಾನಿಸ್ತಾನದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 'ನಾನು ಇಸ್ಲಾಂ ಧರ್ಮದ ಪವಿತ್ರ ಧರ್ಮವನ್ನು ಪಾಲಿಸಿ ರಕ್ಷಿಸುತ್ತೇನೆ. ಸಂವಿಧಾನದ ಅನುಷ್ಠಾನವನ್ನು ಗೌರವಿಸಿ ಮೇಲ್ವಿಚಾರಣೆ ನಡೆಸುತ್ತೇನೆ' ಎಂದು ಘನಿ ಪ್ರಮಾಣವಚನ ಸಮಾರಂಭದಲ್ಲಿ ಹೇಳಿದ್ದಾರೆ.
ಇತ್ತ ಅಶ್ರಫ್ ಘನಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರೆ ಅವರ ಪ್ರತಿಸ್ಪರ್ಧಿ ಅಬ್ದುಲ್ಲಾ ಅಬ್ದುಲ್ಲಾ ಅವರು ತಮ್ಮದೇ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ನಡೆಸಿ ದೇಶವನ್ನು ಹೊಸ ರಾಜಕೀಯ ಬಿಕ್ಕಟ್ಟಿಗೆ ಸಿಲುಕಿಸಿದ್ದಾರೆ.