ETV Bharat / international

ಕೋವಿಡ್​ ರೂಪಾಂತರಿಯ ಭಯ : ಭೂತಾನ್​​ನಲ್ಲಿ 7 ದಿನ ರಾಷ್ಟ್ರವ್ಯಾಪಿ ಲಾಕ್​ಡೌನ್​ ಘೋಷಣೆ

author img

By

Published : Dec 23, 2020, 10:25 AM IST

ಭೂತಾನ್​​ನಲ್ಲಿ ಕೋವಿಡ್​ ರೂಪಾಂತರದ ವೈರಸ್​ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆ ಪ್ರಧಾನಿ ಲೋಟೆ​ ಶೆರಿಂಗ್ 7 ದಿನಗಳ ರಾಷ್ಟ್ರವ್ಯಾಪಿ ಲಾಕ್​ಡೌನ್​ ಘೋಷಿಸಿದ್ದಾರೆ. ಭೂತಾನ್​ನಲ್ಲಿ ಈವರೆಗೆ 479 ಕೋವಿಡ್​ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 430 ಸೋಂಕಿತರು ಗುಣಮುಖರಾಗಿದ್ದಾರೆ.

Bhutan PM announces 7-day nationwide lockdown amid new Covid-19 cases
7 ದಿನಗಳ ಲಾಕ್​ಡೌನ್​ ಘೋಷಿಸಿದ ಪ್ರಧಾನಿ ಲೋಟೆ​ ಶೆರಿಂಗ್

ಥಿಂಫು/ಭೂತಾನ್​: ರೂಪಾಂತರಗೊಂಡಿರುವ ಕೋವಿಡ್​ ಪ್ರಕರಣಗಳ ಹೆಚ್ಚಳ ಹಿನ್ನೆಲೆ ಭೂತಾನ್​ನಲ್ಲಿ 7 ದಿನಗಳ ಕಾಲ ರಾಷ್ಟ್ರವ್ಯಾಪಿ ಲಾಕ್​ಡೌನ್​ ಹೇರಿ ಭೂತಾನ್​ ಪ್ರಧಾನಿ ಲೋಟೆ​ ಶೆರಿಂಗ್ ಆದೇಶ ಹೊರಡಿಸಿದ್ದಾರೆ.

ಡಿಸೆಂಬರ್ 23 ರಿಂದ ಏಳು ದಿನಗಳವರೆಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಗೊಳಿಸಲಾಗುವುದು ಎಂದು ಪ್ರಧಾನಿ ತಮ್ಮ​ ಹೇಳಿಕೆಯಲ್ಲಿ ತಿಳಿಸಿದ್ದು, ಲಾಕ್‌ಡೌನ್, ಸರ್ಕಾರವು ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ ಮತ್ತು ಸಮುದಾಯಗಳಲ್ಲಿ ಹರಡುವಿಕೆಯನ್ನು ತಡೆಗಟ್ಟಲು ಸಹಕಾರಿಯಾಗಿದೆ ಎಂದಿದ್ದಾರೆ.

ಡಿಸೆಂಬರ್ 22 ರಂದು ಭೂತಾನ್​ನ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಹೆಲ್ತ್​ ಬುಲೆಟಿನ್ ಪ್ರಕಾರ, ಭೂತಾನ್​ನಲ್ಲಿ 479 ಕೋವಿಡ್​ ಹೊಸ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 430 ಸೋಂಕಿತರು ಗುಣಮುಖರಾಗಿದ್ದಾರೆ. ಇದುವರೆಗೂ ಕೊರೊನಾ ಸೋಂಕಿನಿಂದ ಭೂತಾನ್​ನಲ್ಲಿ ಸಾವುಗಳು ಸಂಭವಿಸಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ.

ಅಗತ್ಯ ಸೇವೆಗಳಿಗಾಗಿ ಗುರುತು ಪಡಿಸಿರುವ ಅಂಗಡಿಗಳು ಮಾತ್ರ ಬಾಗಿಲು ತೆರೆದಿದ್ದು, ಭೂತಾನ್​ನ ಎಲ್ಲಾ ಶಾಲೆಗಳು, ಸಂಸ್ಥೆಗಳು, ಕಚೇರಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಮುಚ್ಚಿವೆ. ವಲಯಗಳೊಳಗೆ ಓಡಾಡಲು ಕಾರ್ಡ್ ಹೊಂದಿರುವ ವ್ಯಕ್ತಿಗಳ ಓಡಾಟ ಮತ್ತು ಅಗತ್ಯ ವಸ್ತುಗಳ ವಿತರಣೆ ನಾಳೆಯಿಂದ ಥಿಂಫುವಿನಲ್ಲಿ ಪ್ರಾರಂಭವಾಗಲಿದೆ.

ಇದನ್ನೂ ಓದಿ: ಇಫ್ಕೋ ರಸಗೊಬ್ಬರ ಕಾರ್ಖಾನೆಯಲ್ಲಿ ಅನಿಲ ಸೋರಿಕೆ : ಇಬ್ಬರು ನೌಕರರು ಸಾವು, 15 ಮಂದಿ ಅಸ್ವಸ್ಥ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.