ಬೀಜಿಂಗ್ (ಚೀನಾ): ಜೂನ್ ತಿಂಗಳಿನಿಂದ ನಿಲ್ಲಿಸಿದ್ದ ಕಚ್ಚಾ ತೈಲ ಆಮದು ಪ್ರಕ್ರಿಯೆಯನ್ನು ಚೀನಾ ಪುನಾರಂಭಿಸಿದೆ. ಇರಾನ್ನಿಂದ ದಿನಕ್ಕೆ 1 ಲಕ್ಷದ 20 ಸಾವಿರ ಬ್ಯಾರಲ್ಗಳಷ್ಟು ಕಚ್ಚಾ ತೈಲವನ್ನು ಇರಾನ್ನಿಂದ ಜುಲೈನಲ್ಲಿ ಆಮದು ಮಾಡಿಕೊಳ್ಳಲಾಗಿದೆ ಎಂದು ರಷ್ಯಾ ಟುಡೇ ವರದಿ ಮಾಡಿದೆ.
ಮಾಹಿತಿ ವಿಶ್ಲೇಷಣಾ ಕಂಪನಿಯಾದ ಕೆಪ್ಲರ್ ರೇಡಿಯೋ ಫರ್ದಾಗೆ ಈ ಮಾಹಿತಿ ನೀಡಿದ್ದಾಗಿ ವರದಿಯಾಗಿದ್ದು, ಇಂಡೋನೇಷ್ಯಾದ ಮೂಲದ ಗಿಸ್ಸೆಲ್ ಎಂಬ ಲೇಬಲ್ ಇರುವ, ಆದರೆ ಮೂಲತಃ ಇರಾನ್ ಮೂಲದ ತೈಲವನ್ನು ಚೀನಾ ಆಮದು ಮಾಡಿಕೊಂಡಿದೆ ಎನ್ನಲಾಗ್ತಿದೆ.
ಅಮೆರಿಕ ಇರಾನ್ನಿಂದ ತೈಲ ರಫ್ತಿಗೆ ನಿರ್ಬಂಧ ವಿಧಿಸಿದ್ದು, 15 ಟ್ಯಾಂಕರ್ಗಳು ವಿವಿಧ ದೇಶಗಳ ಹೆಸರಿನಲ್ಲಿ ಬೇರೆ ದೇಶಗಳಿಗೆ ರಫ್ತಾಗಿವೆ ಎಂದು ತಿಳಿದುಬಂದಿದೆ. ಚೀನಾ ಈವರೆಗೆ ಇರಾನ್ನಿಂದ ದಿನವೊಂದಕ್ಕೆ ಸರಾಸರಿ 77 ಸಾವಿರ ಬ್ಯಾರಲ್ಗಳನ್ನು ಆಮದು ಮಾಡಿಕೊಳ್ಳುತ್ತಿದೆ.
ಅಮೆರಿಕ ತೈಲ ರಫ್ತಿನ ಮೇಲೆ ನಿರ್ಬಂಧ ಹೇರಿದಾಗಿನಿಂದ ಸುಮಾರು 9 ಪಟ್ಟು ರಫ್ತು ಕಡಿಮೆಯಾಗಿದ್ದು, ಇರಾನ್ನಿಂದ ಚೀನಾ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿರುವುದು ದೃಢಪಟ್ಟಿದೆ.