ETV Bharat / international

ಆಫ್ಘನ್​ನಲ್ಲಿ ಅಮೆರಿಕ ಸೈನಿಕರ ಕೈಸೇರಿದ್ದ ಮಗು ಸುರಕ್ಷಿತ: ತಾಯಿ ಮಡಿಲಲ್ಲಿ ಕಿಲ ಕಿಲ - ಅಫ್ಘಾನಿಸ್ತಾನ ಮಕ್ಕಳ ಸುದ್ದಿ

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗೋಡೆಯ ಮೇಲಿಂದ ಮಗುವೊಂದನ್ನು ಯುಎಸ್​ ಪಡೆಗೆ ಹಸ್ತಾಂತರ ಮಾಡಲಾಗಿತ್ತು. ಆ ಮಗು ಇದೀಗ ತನ್ನ ತಂದೆ-ತಾಯಿಯ ಮಡಿಲು ಸೇರಿದೆ.

Kabul airport
ತಾಯಿ ಮಡಿಲು ಸೇರಿದ ಕಂದಮ್ಮ
author img

By

Published : Aug 22, 2021, 9:52 AM IST

ಕಾಬೂಲ್(ಅಫ್ಘಾನಿಸ್ತಾನ): ತಾಲಿಬಾನ್ ಉಗ್ರರ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಭಯಭೀತರಾದ ಜನರು ಬೇರೆ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳನ್ನು ಹೇಗಾದರೂ ಕಾಪಾಡಬೇಕು ಎಂದು ಭಾವಿಸಿ ಅಮೆರಿಕದ ಸೈನಿಕರಿಗೆ ಒಪ್ಪಿಸುತ್ತಿರುವ ದೃಶ್ಯಗಳು ಮೊಬೈಲ್​ಗಳಲ್ಲಿ ಸೆರೆಯಾಗಿದ್ದವು. ಅಂತೆಯೇ ಪುಟ್ಟ ಕಂದಮ್ಮನನ್ನು ಗೋಡೆಯ ಮೇಲಿಂದ ಸೈನಿಕರಿಗೆ ಹಸ್ತಾಂತರ ಮಾಡುವ ವಿಡಿಯೋ ಎಲ್ಲೆಡೆ ವೈರಲ್​ ಆಗಿತ್ತು. ಈ ದೃಶ್ಯಗಳನ್ನು ಕಂಡ ಜನರು ಮಮ್ಮಲ ಮರುಗಿದ್ದರು. ಇದೀಗ ಆ ಮಗು ಮತ್ತೆ ತನ್ನ ಪೋಷಕರ ಮಡಿಲು ಸೇರಿದೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗೋಡೆಯ ಮೇಲಿಂದ ಮಗುವೊಂದನ್ನು ಯುಎಸ್​ ಪಡೆಗೆ ಹಸ್ತಾಂತರ ಮಾಡಲಾಗಿತ್ತು. ತಾಲಿಬಾನ್​ ರಕ್ಕಸರ ಕೈಗೆ ಸಿಕ್ಕಿ ಮಗುವಿನ ಪ್ರಾಣಕ್ಕೆ ಕುತ್ತು ಬರಬಹುದು ಎಂದು ಈ ರೀತಿ ಮಾಡಿದ್ದರು. ಆದರೆ ಅಮೆರಿಕ ಪಡೆಯ ಬಳಿಯಿದ್ದ ಮಗು ಮತ್ತೆ ತನ್ನ ತಂದೆ ತಾಯಿಯ ಮುಖ ನೋಡುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಏಕೆಂದರೆ ಮಗುವನ್ನು ಯುಎಸ್​ ಸೈನಿಕರು ಅಲ್ಲಿಂದ ಸ್ಥಳಾಂತರ ಮಾಡಿದ್ದರು. ಇದೀಗ ಆ ಕಂದಮ್ಮ ಹೆತ್ತವರ ಮಡಿಲು ಸೇರಿದೆ ಎಂದು ಯುಎಸ್ ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಇದನ್ನು ಓದಿ: ವಿಡಿಯೋ: ಕಂದಮ್ಮಗಳ ಅಮೆರಿಕ ಸೈನಿಕರ ಕೈಗೆ ಒಪ್ಪಿಸುತ್ತಿರುವ ಅಫ್ಘನ್ ಪೋಷಕರು

ಒಬ್ಬ ತಾಯಿ ತನ್ನ ಕಂದಮ್ಮನನ್ನು ತಾಲಿಬಾನ್​ ಉಗ್ರರ ಕೈಯಿಂದ ಕಾಪಾಡಲು ಅಮೆರಿಕದ ಸೈನಿಕರಿಗೆ ನೀಡುತ್ತಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿತ್ತು. ಆ ಬಳಿಕ ಪೆಂಟಗನ್‌ನ ವಕ್ತಾರ ಜಾನ್ ಕಿರ್ಬಿ ಮಗುವಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.
"ವೈರಲ್​ ಆದ ವಿಡಿಯೋದಲ್ಲಿರುವ ಮಗುವಿಗೆ ಚಿಕಿತ್ಸೆ ಅವಶ್ಯಕತೆ ಇತ್ತು. ಹೀಗಾಗಿ ಗೋಡೆಯ ಮೇಲಿಂದ ಪೋಷಕರು ಮಗುವನ್ನು ನೀಡಿದ್ದರು. ಇದೀಗ ಆ ಮಗುವಿಗೆ ಚಿಕಿತ್ಸೆ ನೀಡಿ ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.