ಸಿಡ್ನಿ( ಆಸ್ಟ್ರೇಲಿಯಾ): ಹಾಂಕಾಂಗ್‌ನೊಂದಿಗಿನ ಹಸ್ತಾಂತರ ಒಪ್ಪಂದ ಮತ್ತು ಹಾಂಕಾಂಗ್ ನಿವಾಸಿಗಳಿಗೆ ವಿಸ್ತೃತ ವೀಸಾಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ.
ಅರೆ ಸ್ವಾಯತ್ತ ಭೂಪ್ರದೇಶ ಹಾಂಕಾಂಗ್ ಮೇಲೆ ಕಠಿಣ ರಾಷ್ಟ್ರೀಯ ಭದ್ರತಾ ಕಾನೂನನ್ನು ಚೀನಾ ಹೇರಿರುವುದಕ್ಕೆ ತಿರುಗೇಟು ನೀಡುವುದಕ್ಕಾಗಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ.
ವೀಸಾಗಳ ಶ್ರೇಣಿಯನ್ನು ಎರಡರಿಂದ ಐದು ವರ್ಷಗಳವರೆಗೆ ವಿಸ್ತರಿಸಲಾಗುವುದು ಮತ್ತು ಶಾಶ್ವತ ರೆಸಿಡೆನ್ಸಿ ವೀಸಾಗಳಿಗೆ ಬೇರೆ ಮಾರ್ಗಗಳ ಪ್ರಸ್ತಾಪಗಳನ್ನು ಪ್ರಧಾನಿ ಸ್ಕಾಟ್ ಮಾರಿಸನ್ ಪ್ರಕಟಿಸಿದ್ದಾರೆ.