ಸಿಡ್ನಿ (ಆಸ್ಟ್ರೇಲಿಯಾ): ಸಿಡ್ನಿಯಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಪ್ರತಿಭಟನೆ ಮುಂದುವರಿಯುವುದನ್ನು ತಡೆಯಲು ಆಸ್ಟ್ರೇಲಿಯಾ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಪ್ರತಿಭಟನೆಯಿಂದ ಕೊರೊನಾ ಹರಡುವ ಸಾಧ್ಯತೆಯಿದೆ ಎಂದಿದ್ದಾರೆ.
ಯುಎಸ್ ಪ್ರತಿಭಟನಾಕಾರರಿಗೆ ಬೆಂಬಲ ನಿಡುವ ನಿಟ್ಟಿನಲ್ಲಿ ಸಿಡ್ನಿ ನಗರ ಕೇಂದ್ರದಲ್ಲಿ ನಾಳೆ ನಡೆಯಲಿರುವ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು 10,000ಕ್ಕೂ ಅಧಿಕ ಜನ ಸಿದ್ಧರಾಗಿದ್ದಾರೆ.
ಕಡ್ಡಾಯವಾಗಿ ಮಾಸ್ಕ್ ಹಾಗೂ ಪಿಪಿಇ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಸಂಘಟಕರು ಪಾಲ್ಗೊಳ್ಳುವವರಿಗೆ ತಿಳಿಸಿದ್ದಾರೆ.
ಆದರೆ, ಪೊಲೀಸರು ಮತ್ತು ಸರ್ಕಾರದ ಈ ಪ್ರತಿಭಟನೆಯನ್ನು ಕಾನೂನುಬಾಹಿರ ಎಂದು ಪರಿಗಣಿಸಿ ಪ್ರತಿಭನಟನೆ ತಡೆಯಲು ಪ್ರಯತ್ನಿಸುತ್ತಿದ್ದಾರೆ.
"ನಿಮ್ಮ ಆರೋಗ್ಯ ಮತ್ತು ಇತರರ ಆರೋಗ್ಯವನ್ನು ಅಪಾಯಕ್ಕೆ ತಳ್ಳಬೇಡಿ, ಪ್ರತಿಭಟನೆ ಬದಲು ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಬೇರೆ ಮಾರ್ಗವನ್ನು ಕಂಡುಕೊಳ್ಳೋಣ" ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ.