ಅಫ್ಘಾನಿಸ್ತಾನ: ಅಫ್ಘಾನಿಸ್ತಾನದ ಫೈಜಾಬಾದ್‌ನ ಆಗ್ನೇಯಕ್ಕೆ 83 ಕಿಮೀ ದೂರದಲ್ಲಿರುವ ಪ್ರದೇಶದಲ್ಲಿ ಬೆಳಗ್ಗೆ 6.08ಕ್ಕೆ 4.5 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
ಆಗಸ್ಟ್ 15ರಂದು 5.5 ತೀವ್ರತೆಯ ಭೂಕಂಪನವು ಅಫ್ಘಾನಿಸ್ತಾನ ಮತ್ತು ತಜಕಿಸ್ತಾನದಲ್ಲಿ ಸಂಭವಿಸಿತ್ತು. ಇಂದು ಸಂಭವಿಸಿದ ಕಂಪನದಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಆಫ್ಘನ್ ಸದ್ಯದ ಪರಿಸ್ಥಿತಿಗೆ ಅಲ್ಲಿನ ನಾಯಕರೇ ಕಾರಣ, ನಾವಲ್ಲ: ಜೋ ಬೈಡನ್ ಸಮರ್ಥನೆ
ತಾಲಿಬಾನ್ ಅಟ್ಟಹಾಸದಿಂದ ಕಂಗಾಲಾಗಿರುವ ನಾಡಿನಲ್ಲಿ ಜನರಿಗೆ ಭೂಕಂಪನವೂ ಸಮಸ್ಯೆ ಸೃಷ್ಟಿಸುತ್ತಿದೆ.