ETV Bharat / international

ತ್ರಿಪಕ್ಷೀಯ ಕಡಲ ಭದ್ರತಾ ಸಹಕಾರ: ಕೊಲಂಬೊ ತಲುಪಿದ ಅಜಿತ್ ದೋವಲ್

author img

By

Published : Nov 27, 2020, 4:00 PM IST

ಸಮುದ್ರ ಮತ್ತು ಭದ್ರತಾ ಸಹಕಾರ ಕುರಿತು ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ನಡುವಿನ ತ್ರಿಪಕ್ಷೀಯ ಮಾತುಕತೆಗಾಗಿ ಎನ್ಎಸ್ಎ ಅಜಿತ್ ದೋವಲ್ ಕೊಲಂಬೊ ತಲುಪಿದ್ದಾರೆ ಎಂದು ಭಾರತೀಯ ಹೈಕಮಿಷನ್ ತಿಳಿಸಿದೆ.

ಕೊಲಂಬೊ ತಲುಪಿದ ಅಜಿತ್ ದೋವಲ್
ಕೊಲಂಬೊ ತಲುಪಿದ ಅಜಿತ್ ದೋವಲ್

ಕೊಲಂಬೊ: ಕಡಲ ಮತ್ತು ಭದ್ರತಾ ಸಹಕಾರ ಕುರಿತು ತ್ರಿಪಕ್ಷೀಯ ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಸಮಾಲೋಚನೆಗಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೊಲಂಬೊಗೆ ಆಗಮಿಸಿದ್ದಾರೆ. ಶ್ರೀಲಂಕಾದ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಶವೇಂದ್ರ ಸಿಲ್ವಾ ದೋವಲ್​ಗೆ ಸ್ವಾಗತ ನೀಡಿದರು ಎಂದು ಭಾರತೀಯ ಹೈಕಮಿಷನ್ ಟ್ವೀಟ್ ಮಾಡಿದೆ.

ಇದನ್ನೂ ಓದಿ:26 ವರ್ಷಗಳ ನಂತರ 'ನಾಗಾರ್ಜುನ ಬೆಷ' ಆಚರಣೆ

ತ್ರಿಪಕ್ಷೀಯ ಕಡಲ ಭದ್ರತಾ ಸಹಕಾರ ಕುರಿತ ಮೊದಲ ಎನ್‌ಎಸ್‌ಎ ಮಟ್ಟದ ಸಭೆ ಇದಾಗಿದೆ. ದೋವಲ್ ಜೊತೆಗೆ, ಶ್ರೀಲಂಕಾದ ರಕ್ಷಣಾ ಪ್ರಧಾನ ಕಾರ್ಯದರ್ಶಿ ಮೇಜರ್ ಜನರಲ್ (ನಿವೃತ್ತ) ಕಮಲ್ ಗುಣರತ್ನ ಮತ್ತು ಮಾಲ್ಡೀವ್ಸ್ ರಕ್ಷಣಾ ಸಚಿವ ಮರಿಯಾ ದೀದಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಎನ್‌ಎಸ್‌ಎ ಮಟ್ಟದ ತ್ರಿಪಕ್ಷೀಯ ಸಭೆ ಹಿಂದೂ ಮಹಾಸಾಗರದ ದೇಶಗಳ ಸಹಕಾರಕ್ಕಾಗಿ ಪರಿಣಾಮಕಾರಿ ವೇದಿಕೆಯಾಗಿ ಕಾರ್ಯನಿರ್ವಹಿಸಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.

ಇದನ್ನೂ ಓದಿ:ತನ್ನದೇ ಬಾಹ್ಯಾಕಾಶ ಕೇಂದ್ರ ಅಭಿವೃದ್ಧಿಪಡಿಸುತ್ತಂತೆ ರಷ್ಯಾ

ಹಿಂದಿನ ಸಭೆಗಳು 2011 ರಲ್ಲಿ ಮಾಲ್ಡೀವ್ಸ್​ನಲ್ಲಿ, 2013 ರಲ್ಲಿ ಶ್ರೀಲಂಕಾದಲ್ಲಿ ಮತ್ತು 2014 ಭಾರತದಲ್ಲಿ ನಡೆದಿದ್ದರಿಂದ ಆರು ವರ್ಷಗಳ ನಂತರ ಯಾಂತ್ರಿಕ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.