ETV Bharat / international

ದೆಹಲಿಯ ಜೊತೆಗೆ ಪಾಕ್‌ನಲ್ಲೂ ಕಾರ್ಯಕ್ರಮ ಆಯೋಜಿಸಿತ್ತು ತಬ್ಲಿಗಿ ಜಮಾತ್: ಉದ್ದೇಶವೇನು? - COVID-19 ಪ್ರಕರಣಗಳ ತಾಣವಾದ ಪಾಕಿಸ್ತಾನದ ತಬ್ಲೀಘಿ ಜಮಾಅತ್‌ ಕೇಂದ್ರ

ಪಾಕಿಸ್ತಾನದ ರಾಯ್‌ವಿಂಡ್‌ನಲ್ಲಿರುವ ತಬ್ಲಿಗಿ ಜಮಾತ್‌ನ ಕೇಂದ್ರವೂ ಸಹ ಕೊರೊನಾ ಪ್ರಕರಣಗಳ ಪ್ರಮುಖ ತಾಣವಾಗಿದೆ. ಮಾರ್ಚ್ 11ರಿಂದ 15 ರವರೆಗೆ ರಾಯ್‌ವಿಂಡ್​ನಲ್ಲಿ ಲಾಹೋರ್ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ತಬ್ಲಿಗಿ ಜಮಾತ್ ಕಾರ್ಯಕ್ರಮ ಆಯೋಜಿಸಿತ್ತು.

pak
pak
author img

By

Published : Apr 3, 2020, 10:10 AM IST

ನವದೆಹಲಿ: ದಕ್ಷಿಣ ದೆಹಲಿಯ ನಿಜಾಮುದ್ದೀನ್‌ನಲ್ಲಿರುವ ತಬ್ಲಿಗಿ ಜಮಾತ್‌ನ ಪ್ರಧಾನ ಕಚೇರಿಯಂತೆ, ಪಾಕಿಸ್ತಾನದ ರಾಯ್‌ವಿಂಡ್‌ನಲ್ಲಿರುವ ತಬ್ಲಿಗಿ ಜಮಾತ್ ಕೇಂದ್ರವೂ ಸಹ ಕೊರೊನಾ ಪ್ರಕರಣಗಳ ಹಾಟ್​ಸ್ಪಾಟ್ ಆಗಿದೆ.

ವೈರಸ್ ಹರಡುವುದನ್ನು ತಪ್ಪಿಸುವ ಸಲುವಾಗಿ ಪಾಕ್‌ನ ಪಂಜಾಬ್ ಪ್ರಾಂತ್ಯದ ರಾಯ್‌ವಿಂಡ್‌ ನಗರವನ್ನು ಇದೀಗ ಲಾಕ್​ಡೌನ್ ಮಾಡಲಾಗಿದೆ. ಅಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಪಾಕ್ ಸುದ್ದಿ ಮಾಧ್ಯಮ ವರದಿ ಮಾಡಿವೆ.

ತಬ್ಲಿಗಿ ಜಮಾತ್‌ನಲ್ಲಿದ್ದ 110 ಜನರನ್ನು ಈಗಾಗಲೇ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. 41 ಮಂದಿಯಲ್ಲಿ ಕೋವಿಡ್-19 ದೃಢಪಟ್ಟಿದೆ. ಇತರರ ವರದಿಗಳು ಇನ್ನಷ್ಟೇ ಬರಬೇಕಿದೆ. ಕೆಲ ಮಾಧ್ಯಮ ವರದಿಗಳ ಪ್ರಕಾರ, ಸುಮಾರು 600 ಸದಸ್ಯರು ‘ಮರ್ಕಾಜ್’ನೊಳಗಿದ್ದರು ಎಂದು ತಿಳಿದುಬಂದಿದೆ.

ಮಾರ್ಚ್ 11ರಿಂದ 15ರವರೆಗೆ ನಡೆದ ಜಮಾತ್ ಕಾರ್ಯಕ್ರಮದಲ್ಲಿ ಮಲೇಷ್ಯಾ, ಇಂಡೋನೇಷ್ಯಾ, ಥೈಲ್ಯಾಂಡ್, ಚೀನಾ, ಮಧ್ಯ ಏಷ್ಯಾದ ದೇಶಗಳು ಮತ್ತು ಭಾರತ ಸೇರಿದಂತೆ ಹಲವು ದೇಶಗಳ 500ಕ್ಕೂ ಹೆಚ್ಚು ವಿದೇಶಿಯರು ಸೇರಿ ಸಾವಿರಾರು ಜನ ಭಾಗವಹಿಸಿದ್ದರು.

ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಕಾರ್ಯಕ್ರಮಗಳ ಆಯೋಜನೆಯ ಮೇಲೆ ನಿಷೇಧ ಹೇರಿದ್ದರೂ, ಲಾಹೋರ್ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಈ ಕಾರ್ಯಕ್ರಮ ನಡೆದಿತ್ತು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.