ETV Bharat / international

ಸಾವಿಗೆ ಹೆದರುವುದಿಲ್ಲ, ಅಫ್ಘನ್​ ವಾಪಸಾಗುವ ಮಾತುಕತೆ ನಡೆಯುತ್ತಿದೆ: ಮೌನ ಮುರಿದ ಅಶ್ರಫ್ ಘನಿ..

author img

By

Published : Aug 19, 2021, 12:58 AM IST

Updated : Aug 19, 2021, 6:18 AM IST

ಅಶ್ರಫ್ ಘನಿ ಮತ್ತು ಅವರ ಕುಟುಂಬವನ್ನು ಮಾನವೀಯ ನೆಲೆಯಲ್ಲಿ ದೇಶಕ್ಕೆ ಸ್ವಾಗತಿಸಲಾಗಿದೆ ಎಂಬ ಯುಎಇ ಹೇಳಿಕೆ ಬೆನ್ನಲ್ಲೇ ಸ್ವತಃ ಅಶ್ರಫ್ ಘನಿ ವಿಡಿಯೋ ಸಂದೇಶದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

Afghanistan Former president Ashraf Ghani breaks his silence
Afghanistan Row: ಪಲಾಯನದ ನಂತರ ಮೊದಲ ಬಾರಿಗೆ ಮೌನ ಮುರಿದ ಅಶ್ರಫ್ ಘನಿ..!

ಕಾಬೂಲ್​, ಅಫ್ಘಾನಿಸ್ತಾನ: ತಾಲಿಬಾನಿಗಳು ಕಾಬೂಲ್ ಅನ್ನು ವಶಕ್ಕೆ ಪಡೆದುಕೊಳ್ಳುವ ಮೊದಲೇ ದೇಶದಿಂದ ಪಲಾಯನ ಮಾಡಿದ್ದ ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು ಪೂರ್ತಿ ವಿವರ ತಿಳಿಯದೇ ಯಾರೂ ಕೂಡಾ ನಿರ್ಧಾರಕ್ಕೆ ಬರಬಾರದು. ನಾನು ಅಫ್ಘಾನಿಸ್ತಾನದಲ್ಲಿ ಮತ್ತಷ್ಟು ರಕ್ತಪಾತವನ್ನು ನಿಲ್ಲಿಸುವ ಸಲುವಾಗಿ ಪಲಾಯನ ಮಾಡಬೇಕಾಗಿ ಬಂತು ಎಂದಿದ್ದಾರೆ.

  • " class="align-text-top noRightClick twitterSection" data="">

ಸಿರಿಯಾ ಮತ್ತು ಯೆಮೆನ್​ನಲ್ಲಿ ಆಗಿದ್ದಂತೆ ಕಾಬೂಲ್​​ನಲ್ಲಿ ರಕ್ತಪಾತ ಆರಂಭವಾಗುವುದು ನನಗೆ ಇಷ್ಟವಿರಲಿಲ್ಲ. ಹಾಗಾಗಿ ನಾನು ಕಾಬೂಲ್ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದೆ ಎಂದು ಸಿಎನ್​ಎನ್ ವರದಿ ಮಾಡಿದೆ.

ಈಗ ನಾನು ಅಫ್ಘಾನಿಸ್ತಾನದ ಅಧ್ಯಕ್ಷನಾಗಿದ್ದರೆ, ಜನರನ್ನು ಗಲ್ಲಿಗೇರಿಸಲಾಗುತ್ತಿತ್ತು ಮತ್ತು ಇದು ನಮ್ಮ ಇತಿಹಾಸದಲ್ಲಿ ಭೀಕರ ದುರಂತವಾಗುತ್ತಿತ್ತು. ಸಾವಿಗೆ ನಾನು ಹೆದರುವುದಿಲ್ಲ ಮತ್ತು ಅಫ್ಘಾನಿಸ್ತಾನವನ್ನು ಅವಮಾನಿಸಲು ಈ ಕೆಲಸ ಮಾಡಿಲ್ಲ. ರಕ್ತಪಾತ ಮತ್ತು ಅಫ್ಘಾನಿಸ್ತಾನದ ನಾಶವನ್ನು ತಪ್ಪಿಸಲು ನನ್ನನ್ನು ಅಫ್ಘಾನಿಸ್ತಾನದಿಂದ ಹೊರಗೆ ಹೋಗಬೇಕಾಯಿತು ಎಂದು ಸಿಎನ್ಎನ್ ವರದಿ ಮಾಡಿದೆ.

ಹಣ ತೆಗೆದುಕೊಂಡು ಹೋಗಿಲ್ಲ..

ಸೂಟ್​ ಕೇಸ್​ಗಳಲ್ಲಿ ಹಣ ತುಂಬಿಸಿಕೊಂಡು ಆಫ್ಘಾನಿಸ್ತಾನಕ್ಕೆ ಪಲಾಯನ ಮಾಡಲಾಗಿದೆ ಎಂಬ ಆರೋಪ ಆಧಾರ ರಹಿತ ಮತ್ತು ಇದು ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ತೇಜೋವಧೆ ಮಾಡುವ ಯತ್ನ ಎಂದು ಅಶ್ರಫ್ ಘನಿ ಹೇಳಿದ್ದಾರೆ ಎಂದು ಅಲ್ ಜಜೀರಾ ಸುದ್ದಿಸಂಸ್ಥೆ ವರದಿ ಮಾಡಿದೆ.

ನಾನು ದೇಶದೊಂದಿಗೆ ಮಾತನಾಡುತ್ತೇನೆ ಮತ್ತು ದೇಶಕ್ಕೆ ಹಿಂದಿರುಗುವ ಮಾತುಕತೆಯಲ್ಲಿದ್ದೇನೆ ಎಂದು ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ ಎಂದು ಎಎಫ್​ಬಿ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಅಶ್ರಫ್ ಘನಿ ಮತ್ತು ಅವರ ಕುಟುಂಬವನ್ನು ಮಾನವೀಯ ನೆಲೆಯಲ್ಲಿ ದೇಶಕ್ಕೆ ಸ್ವಾಗತಿಸಲಾಗಿದೆ ಎಂದು ಯುಎಇ ವಿದೇಶಾಂಗ ವ್ಯವಹಾರಗಳು ಮತ್ತು ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯವು ಸ್ಪಷ್ಟನೆ ನೀಡಿದ ನಂತರ ಅಶ್ರಫ್ ಘನಿ ವಿಡಿಯೋ ಸಂದೇಶ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಬೆಳವಣಿಗೆಗಳ ಬಗ್ಗೆ ಭಾರತ ಎಚ್ಚರಿಕೆಯಿಂದಿದೆ: ಜೈಶಂಕರ್​

Last Updated : Aug 19, 2021, 6:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.