ETV Bharat / international

ಸ್ಮಶಾನದಂತಾದ ಅಫ್ಘಾನಿಸ್ತಾನ: ಒಂದೇ ತಿಂಗಳಲ್ಲಿ 305 ಮಂದಿ ಬಲಿ - Afghanistan series of explosions and targeted attacks

ಕಳೆದ ತಿಂಗಳು ಅಫ್ಘಾನಿಸ್ತಾನದಲ್ಲಿ ನಡೆದ ಬಾಂಬ್​ ದಾಳಿ ಹಾಗೂ ಸರಣಿ ಸ್ಫೋಟದಲ್ಲಿ ಒಟ್ಟು 305 ಮಂದಿ ಸಾವನ್ನಪ್ಪಿದ್ದರೆ, 350 ಮಂದಿ ಗಾಯಗೊಂಡಿದ್ದಾರೆ. ಅಫ್ಘನ್​ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು ಹೇಳುವಂತೆ ಈ ದಾಳಿಗಳ ಜವಾಬ್ದಾರಿ ತಾಲಿಬಾನ್‌ ಹೆಗಲ ಮೇಲಿದೆ.

Afghanistan
ನರಕವಾದ ಅಫ್ಘಾನಿಸ್ತಾನ
author img

By

Published : Apr 2, 2021, 3:38 PM IST

ಕಾಬೂಲ್: ಮಾರ್ಚ್‌ ಒಂದೇ ತಿಂಗಳಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಬಾಂಬ್​ ದಾಳಿ ಹಾಗೂ ಸರಣಿ ಸ್ಫೋಟದಲ್ಲಿ ಭದ್ರತಾ ಸಿಬ್ಬಂದಿ, ನಾಗರಿಕರು ಸೇರಿದಂತೆ ಒಟ್ಟು 305 ಮಂದಿ ಸಾವನ್ನಪ್ಪಿದ್ದರೆ, 350 ಮಂದಿ ಗಾಯಗೊಂಡಿದ್ದಾರೆ.

ಈ ಹಿಂದಿನ ತಿಂಗಳುಗಳಿಗೆ ಹೋಲಿಸಿದರೆ ಮಾರ್ಚ್​ನಲ್ಲಿ ದೇಶದಲ್ಲಿ ನಡೆದ ಸ್ಫೋಟಗಳು ಮತ್ತು ಉದ್ದೇಶಿತ ದಾಳಿಗಳ ಸಂಖ್ಯೆ ಶೇ.20 ರಷ್ಟು ಹೆಚ್ಚಳವಾಗಿದೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ. ಫೆಬ್ರವರಿ ತಿಂಗಳಲ್ಲಿ 264 ಮಂದಿ ಮೃತಪಟ್ಟಿದ್ದರೆ, 278 ಮಂದಿ ಗಾಯಗೊಂಡಿದ್ದರು.

ಇದನ್ನೂ ಓದಿ: ಮಿಲಿಟರಿ ದಂಗೆಯ 2 ತಿಂಗಳ ನಂತರವೂ ಮ್ಯಾನ್ಮಾರ್​ನಲ್ಲಿ ನಿಲ್ಲದ ಹಿಂಸಾಚಾರ

ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿ ಪ್ರಕಾರ ಕಾಬೂಲ್, ನಂಗರ್ಹಾರ್, ಕಂದಹಾರ್, ಹೆಲ್ಮಂಡ್ ಮತ್ತು ಘಜ್ನಿ ಪ್ರಾಂತ್ಯಗಳಲ್ಲಿ ಹೆಚ್ಚಿನ ದಾಳಿಗಳು ವರದಿಯಾಗಿವೆ. ಅಫ್ಘನ್​ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ರಹಮತುಲ್ಲಾ ಅಂದರ್​ ಅವರು ಹೇಳುವಂತೆ ಈ ದಾಳಿಗಳ ಜವಾಬ್ದಾರಿ ಭಯೋತ್ಪಾದಕ ಸಂಘಟನೆ ತಾಲಿಬಾನ್‌ ಹೆಗಲ ಮೇಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.