ETV Bharat / international

ತಾಲಿಬಾನ್​ ಖೈದಿಗಳನ್ನು ಬಿಡುಗಡೆಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದ ಅಫ್ಘಾನ್ ಸರ್ಕಾರ

author img

By

Published : Mar 11, 2020, 12:39 PM IST

ತಾಲಿಬಾನ್​ ಸಂಘಟನೆಯ ಕೈದಿಗಳನ್ನು ಬಂಧಿಸಿದ್ದ ಅಫ್ಘಾನ್​ ಸರ್ಕಾರ ಅಮೆರಿಕ ಮತ್ತು ತಾಲಿಬಾನ್​ ನಡುವಿನ ಶಾಂತಿ ಒಪ್ಪಂದದ ನಂತರ, ಬಂಧಿಸಿರುವ ಖೈದಿಗಳನ್ನು ಬಿಡುಗಡೆಗೊಳಿಸುವುದಾಗಿ ಹೇಳಿದ್ದು, ಮಂಗಳವಾರ ಈ ಒಪ್ಪಂದಕ್ಕೆ ಸಹಿ ಹಾಕಿದೆ.

Afghan President Ghani
ಅಫ್ಘಾನ್​ ಅಧ್ಯಕ್ಷ ಘನಿ

ಕಾಬೂಲ್​​(ಅಫ್ಘಾನಿಸ್ತಾನ): ಕಳೆದು ತಿಂಗಳು ನಡೆದ ತಾಲಿಬಾನ್​ ಮತ್ತು ಅಮೆರಿಕ ನಡುವಿನ ಕದನ ವಿರಾಮದ ಶಾಂತಿ ಒಪ್ಪಂದದ ಒಂದು ಭಾಗವಾದ ತಾಲಿಬಾನ್​​ ಕೈದಿಗಳ ಬಿಡುಗಡೆಗೆ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಮಂಗಳವಾರ ಸಹಿ ಹಾಕಿದ್ದಾರೆ.

ಅಮೆರಿಕ ಮತ್ತು ತಾಲಿಬಾನ್ ಒಪ್ಪಂದದಲ್ಲಿ, ತಾಲಿಬಾನ್​​ ಕೈದಿಗಳ ಬಿಡುಗಡೆ ಬಗ್ಗೆ ಉಲ್ಲೇಖಿಸಲಾಗಿತ್ತು. ಈ ನಿಟ್ಟಿನಲ್ಲಿ ಅನುಕೂಲವಾಗುವಂತಹ ಬಹುನಿರೀಕ್ಷಿತ ಸುಗ್ರೀವಾಜ್ಞೆಗೆ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಸಹಿ ಹಾಕಿರುವುದರಿಂದ ಸದ್ಯದಲ್ಲೇ ತಾಲಿಬಾನ್​ ಖೈದಿಗಳು ಜೈಲಿನಿಂದ ಬಿಡುಗಡೆ ಹೊಂದಲಿದ್ದಾರೆ.

ಇನ್ನು ಈ ಪ್ರಕಟಣೆ ನೀಡಿದ ಘನಿಯ ವಕ್ತಾರ ಸೆಡಿಕ್ ಸೆಡಿಕ್ಕಿ, ಈ ಬಗೆಗಿನ ವಿವರಗಳನ್ನು ಬುಧವಾರ ನೀಡುವುದಾಗಿ ನಿನ್ನೆ ತಿಳಿಸಿದ್ದರು. ಈ ಹಿಂದೆಯೇ ತಾಲಿಬಾನ್​, ತನ್ನ ಸಂಘಟನೆಯ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲು ಬೇಡಿಕೆ ಇಟ್ಟಿತ್ತು. ಆದರೆ, ಈ ಬೇಡಿಕೆಯನ್ನು ಅಫ್ಘಾನಿನ ಅಧ್ಯಕ್ಷರು ತಿರಸ್ಕರಿಸಿದ್ದರು. ಪ್ರಸ್ತುತ ದಿನದಲ್ಲಿ ತಾಲಿಬಾನ್​ ಖೈದಿಗಳನ್ನು ಬಿಡುಗಡೆಗೊಳಿಸಲು ಅಫ್ಘಾನ್​ ಅಧ್ಯಕ್ಷ ಘನಿ ಸಹಿ ಹಾಕಿರುವುದು, ತಾಲಿಬಾನ್​ ಸಂಘಟನೆಗೆ ತೀವ್ರ ಸಂತಸ ತಂದಿದೆ.

ಅಫ್ಘಾನ್ ಪಡೆಗಳ ಮೇಲೆ ತಾಲಿಬಾನ್ ಹಲವಾರು ಬಾರಿ ದಾಳಿ ನಡೆಸಿದ್ದರಿಂದ ಈ ಹಿಂದೆ ತಾಲಿಬಾನ್​​ ಖೈದಿಗಳನ್ನು ಅಫ್ಘಾನ್​ ಸರ್ಕಾರ ಬಿಡುಗಡೆಗೊಳಿಸಲು ಒಪ್ಪರಲಿಲ್ಲ. ಆದರೆ ಇದೀಗ ಅಮೆರಿಕ ಮತ್ತು ತಾಲಿಬಾನ್​ ನಡುವೆ ಫೆ.29ರಂದು ನಡೆದ ಶಾಂತಿ ಒಪ್ಪಂದದಿಂದ ಈ ಕಾರ್ಯ ಸಾಧ್ಯವಾಗಿದ್ದು, ಮಾರ್ಚ್ 10ರ ಹೊತ್ತಿಗೆ 5000 ತಾಲಿಬಾನ್​​ ಖೈದಿಗಳನ್ನು ಬಿಡುಗಡೆಗಳೊಸಲಾಗುವುದು ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.