ETV Bharat / international

ಅಫ್ಘನ್​ ಪಡೆ ವೈಮಾನಿಕ ದಾಳಿ: 11 ಅಲ್​ ಖೈದಾ, ಇಬ್ಬರು ತಾಲಿಬಾನ್​​ ಉಗ್ರರ ಹತ್ಯೆ - ಏರ್​ಸ್ಟ್ರೈಕ್

ಅಫ್ಘಾನಿಸ್ತಾನದ ಹೆಲ್ಮಾಂಡ್ ಪ್ರಾಂತ್ಯದ ನವಾ ಜಿಲ್ಲೆಯಲ್ಲಿ ಅಫ್ಘನ್ ವಾಯುಪಡೆ ಏರ್​ಸ್ಟ್ರೈಕ್ ನಡೆಸಿ 11 ಅಲ್​ ಖೈದಾ, ಇಬ್ಬರು ತಾಲಿಬಾನ್​​ ಉಗ್ರರನ್ನು ಹತ್ಯೆಗೈದಿದೆ.

airstrike
ವೈಮಾನಿಕ ದಾಳಿ
author img

By

Published : Dec 28, 2020, 12:44 PM IST

ಕಾಬೂಲ್​ (ಅಫ್ಘಾನಿಸ್ತಾನ): ಅಫ್ಘನ್ ವಾಯುಪಡೆ (ಎಎಎಫ್) ನಡೆಸಿದ ವೈಮಾನಿಕ ದಾಳಿಯಲ್ಲಿ ಅಲ್-ಖೈದಾ ಸಂಘಟನೆಯ 11 ಮಂದಿ ಹಾಗೂ ಇಬ್ಬರು ತಾಲಿಬಾನ್ ಉಗ್ರರನ್ನು ಹೊಡೆದುರುಳಿಸಲಾಗಿದೆ.

ಅಫ್ಘಾನಿಸ್ತಾನದ ಹೆಲ್ಮಾಂಡ್ ಪ್ರಾಂತ್ಯದ ನವಾ ಜಿಲ್ಲೆಯಲ್ಲಿ ದಾಳಿ ನಡೆಸಲಾಗಿದ್ದು, ಇನ್ನೂ ಇಬ್ಬರು ಉಗ್ರರು ಗಾಯಗೊಂಡಿದ್ದಾರೆ. ಅಲ್-ಖೈದಾ ಉಗ್ರರು ತಾಲಿಬಾನ್ ಉಗ್ರರಿಗೆ ಸ್ಫೋಟಕ ಸಾಧನಗಳನ್ನು ತಯಾರಿಸಲು ಮತ್ತು ಬಳಸಲು ತರಬೇತಿ ನೀಡುತ್ತಿದ್ದಾರೆಂಬ ಮಾಹಿತಿಯಿದೆ ಎಂದು ಅಫ್ಘನ್ ರಕ್ಷಣಾ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ; ಏಳು ತಾಲಿಬಾನ್ ಭಯೋತ್ಪಾದಕರ ಹತ್ಯೆ

ಕಳೆದ ವಾರ ಹೆಲ್ಮಾಂಡ್ ಹಾಗೂ ಕಂದಹಾರ್​ ಪ್ರಾಂತ್ಯದಲ್ಲಿ ನಡೆದ ಏರ್​ಸ್ಟ್ರೈಕ್​​ನಲ್ಲಿ 10ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಲ್ಲಲಾಗಿತ್ತು. ಕಳೆದ ಸೆಪ್ಟೆಂಬರ್​ ತಿಂಗಳಲ್ಲಿ ತಾಲಿಬಾನ್​ ಹಾಗೂ ಅಫ್ಘನ್ ಸರ್ಕಾರ ಶಾಂತಿ ಮಾತುಕತೆ ಪ್ರಾರಂಭಿಸಿದ್ದವು. 2021ರ ಜನವರಿ 5 ರಿಂದ ಈ ಮಾತುಕತೆ ಮುಂದುವರೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.