ಕಾಬೂಲ್ : ಕಳೆದ 24 ಗಂಟೆಯಲ್ಲಿ 215 ಹೊಸ ಸೋಂಕು ಪ್ರಕರಣಗಳು ದೇಶದಲ್ಲಿ ಕಂಡು ಬಂದಿವೆ. ಅಲ್ಲದೇ ಆರೋಗ್ಯ ಸಚಿವ ಫಿರೋಜುದ್ದೀನ್ ಫಿರೋಜ್ ಅವರಿಗೆ ಶುಕ್ರವಾರ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ಆಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲೀಗ ಸುಮಾರು 3,700 ಕೊರೊನಾ ಪ್ರಕರಣಗಳು ವರದಿಯಾಗಿವೆ. ಈವರೆಗೆ 100ಕ್ಕೂ ಹೆಚ್ಚು ಸಾವು ಸಂಭವಿಸಿರುವುದಾಗಿ ತಿಳಿದು ಬಂದಿದೆ.