ETV Bharat / international

ತಾಲಿಬಾನ್ ಉಗ್ರರ ಗುರಿಯಾಗಿಸಿಕೊಂಡು ವೈಮಾನಿಕ ದಾಳಿ: ನಾಗರಿಕರು ಸೇರಿ 20 ಮಂದಿ ಸಾವು - ಹೆಲ್ಮಾಂಡ್ ಪ್ರಾಂತ್ಯ

ತಾಲಿಬಾನ್ ಉಗ್ರರನ್ನು ಗುರಿಯಾಗಿಸಿಕೊಂಡು ಅಫ್ಘನ್​ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಕೆಲವು ನಾಗರಿಕರೂ ಮೃತಪಟ್ಟಿದ್ದಾರೆ.

Afghan army: 20 die in hit on Taliban, including civilians
ವೈಮಾನಿಕ ದಾಳಿ
author img

By

Published : Jun 5, 2021, 1:09 PM IST

ಕಾಬೂಲ್: ಅಫ್ಘಾನಿಸ್ತಾನದ ದಕ್ಷಿಣ ಹೆಲ್ಮಾಂಡ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರನ್ನು ಗುರಿಯಾಗಿಸಿಕೊಂಡು ಅಫ್ಘನ್​ ಪಡೆ ವೈಮಾನಿಕ ದಾಳಿ ನಡೆಸಿದ್ದು, ಕೆಲವು ನಾಗರಿಕರು ಸೇರಿದಂತೆ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೇನಾ ನೆಲೆಯೊಳಗೆ ತಾಲಿಬಾನ್ ಉಗ್ರರು ನುಗ್ಗಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡುತ್ತಿರುವುದನ್ನು ಗಮನಿಸಿದ ಅಫ್ಘನ್​ ವಾಯುಪಡೆ ವೈಮಾನಿಕ ದಾಳಿ ನಡೆಸಿದೆ. ಆದರೆ ಕೆಲ ಅಮಾಯಕ ಜನರೂ ದಾಳಿಯಲ್ಲಿ ಬಲಿಯಾಗಿದ್ದಾರೆ.

ಇದನ್ನೂ ಓದಿ: 24 ಗಂಟೆಯಲ್ಲಿ 100 ತಾಲಿಬಾನ್ ಉಗ್ರರ ಹತೈಗೈದ ಅಫ್ಘನ್​ ಪಡೆ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, ಅಫ್ಘನ್ ಸೇನೆಯು ನಾಗರಿಕರ ಮೇಲೆಯೇ ವೈಮಾನಿಕ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಜೂನ್​ 2ರಂದು ಅಫ್ಘಾನಿಸ್ತಾನದ ವಿವಿಧ ಪ್ರದೇಶಗಳಲ್ಲಿ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಗಳಲ್ಲಿ 100ಕ್ಕೂ ಹೆಚ್ಚು ತಾಲಿಬಾನ್ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿತ್ತು.

ದೇಶಾದ್ಯಂತ ಹಲವಾರು ಸ್ಥಳಗಳಲ್ಲಿ ದಾಳಿ, ಹಿಂಸಾಚಾರಗಳು ಹೆಚ್ಚಾಗಿದ್ದು, ಅಧಿಕೃತವಾಗಿ ಇದರ ಹೊಣೆಯನ್ನು ತಾಲಿಬಾನ್ ಹೊತ್ತಿಲ್ಲ. ಆದರೆ ಕೃತ್ಯಗಳ ಹಿಂದೆ ತಾಲಿಬಾನ್​ ಕೈವಾಡವಿದೆ ಎಂದು ರಕ್ಷಣಾ ಸಚಿವಾಲಯ ಆರೋಪಿಸುತ್ತಾ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.