ಕಾಬೂಲ್ (ಅಫ್ಘಾನಿಸ್ತಾನ) : ತಾಲಿಬಾನ್ ಸಹ-ಸಂಸ್ಥಾಪಕ ಹಾಗೂ ಅಲ್ಲಿನ ಉಪ ಪ್ರಧಾನಿಯಾಗಿರುವ ಅಬ್ದುಲ್ ಘನಿ ಬರದಾರ್ ಸಾವನ್ನಪ್ಪಿದ್ದಾರೆಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಅದಕ್ಕೆ ಖುದ್ದಾಗಿ ತೆರೆ ಎಳೆದಿರುವ ಘನಿ, ನಾನು ಸತ್ತಿಲ್ಲ, ಜೀವಂತವಾಗಿದ್ದೇನೆ ಎಂದು ಹೇಳಿರುವ ಆಡಿಯೋ ಕ್ಲಿಪ್ ವೊಂದನ್ನ ರಿಲೀಸ್ ಮಾಡಲಾಗಿದೆ.
ತಾಲಿಬಾನ್ ಸಂಘಟನೆ ವಕ್ತಾರ ಮೊಹಮ್ಮದ್ ನಯಿಮ್ ಇದಕ್ಕೆ ಸಂಬಂಧಿಸಿದ ಆಡಿಯೋ ಸಂದೇಶ ಪೋಸ್ಟ್ ಮಾಡಿದ್ದು, ಅಬ್ದುಲ್ ಘನಿ ಬರದಾರ್ ಮಾತನಾಡಿದ್ದಾರೆ ಎಂದು ಹೇಳಲಾಗಿರುವ ಆಡಿಯೋ ಇದಾಗಿದೆ.
ಕಳೆದ ಕೆಲ ರಾತ್ರಿಗಳಲ್ಲಿ ನಾನು ಪ್ರವಾಸದಲ್ಲಿದ್ದೆ. ನನ್ನ ಸಹೋದರರು, ಸ್ನೇಹಿತರು ಚೆನ್ನಾಗಿದ್ದೇವೆ ಎಂದಿರುವ ಅವರು, ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸಾವಿನ ಸುದ್ದಿ ಸುಳ್ಳು ಎಂದಿದ್ದಾರೆ.
-
Mullah Bradar Akhund, Deputy PM, Islamic Emirate of Afghanistan in a voice message rejected all those claims that he was injured or killed in a clash. He says it is lies and totally baseless.
— Suhail Shaheen. محمد سهیل شاهین (@suhailshaheen1) September 13, 2021 " class="align-text-top noRightClick twitterSection" data="
">Mullah Bradar Akhund, Deputy PM, Islamic Emirate of Afghanistan in a voice message rejected all those claims that he was injured or killed in a clash. He says it is lies and totally baseless.
— Suhail Shaheen. محمد سهیل شاهین (@suhailshaheen1) September 13, 2021Mullah Bradar Akhund, Deputy PM, Islamic Emirate of Afghanistan in a voice message rejected all those claims that he was injured or killed in a clash. He says it is lies and totally baseless.
— Suhail Shaheen. محمد سهیل شاهین (@suhailshaheen1) September 13, 2021
ಇದನ್ನೂ ಓದಿರಿ: ಕತಾರ್‌ನಿಂದ ಅಫ್ಘಾನ್‌ಗೆ ಪ್ರಯಾಣಿಸಿದ ತಾಲಿಬಾನ್ ತಂತ್ರಗಾರ ಮುಲ್ಲಾ ಅಬ್ದುಲ್ ಘನಿ
ಅಬ್ದುಲ್ ಘನಿ ಬರದಾರ್ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಭಾರತೀಯ ಮಾಧ್ಯಮಗಳಲ್ಲಿ ಹೆಚ್ಚಾಗಿ ಹಬ್ಬಿತ್ತು. ಇದಕ್ಕೆ ಖುದ್ದಾಗಿ ತಾಲಿಬಾನ್ ಸ್ಪಷ್ಟನೆ ನೀಡಿದೆ. 1968ರಲ್ಲಿ ಜನಸಿರುವ ಬರದಾರ್, ತಾಲಿಬಾನ್ ಉಗ್ರ ಸಂಘಟನೆ ಸಹ ಸಂಸ್ಥಾಪಕ. 1980ರಲ್ಲಿ ಸೋವಿಯತ್ ಸೇನೆ ವಿರುದ್ಧ ಹೋರಾಡಿದ್ದ.
ತಾಲಿಬಾನ್‌ನ ರಾಜಕೀಯ ತಂತ್ರಜ್ಞ ಎಂದು ಗುರುತಿಸಿಕೊಂಡಿರುವ ಬರದಾರ್, ಕಳೆದ ಕೆಲ ವರ್ಷಗಳ ಹಿಂದೆ ಕತಾರ್ನಲ್ಲಿ ತಲೆಮರೆಸಿಕೊಂಡಿದ್ದರು. ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೇನೆಯನ್ನ ಹಿಂಪಡೆದುಕೊಳ್ಳುತ್ತಿದ್ದಂತೆ ಮತ್ತೆ ಸಕ್ರಿಯರಾಗಿದ್ದರು. ತಾಲಿಬಾನ್‌ನ ಸಹ ಸಂಸ್ಥಾಪಕನೂ ಆಗಿರುವ ಘನಿ, ದೋಹಾ ಶಾಂತಿ ಒಪ್ಪಂದದಲ್ಲಿ ಪ್ರಮುಖ ಪಾತ್ರವಹಿಸಿದ್ದನು. ಆ ಸಂದರ್ಭದಲ್ಲಿ ಆತ ಹಲವಾರು ದೇಶಗಳ ಪ್ರಮುಖ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದನು.