ETV Bharat / international

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ..ಸುನಾಮಿ ಭೀತಿ ಇಲ್ಲ! - ಇಂಡೋನೇಷ್ಯಾದ ಬಂದಾ ಸಮುದ್ರದ ಬಳಿ 130 ಕಿಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ

ಪೂರ್ವ ಟಿಮೋರ್‌ನ ಈಶಾನ್ಯಕ್ಕೆ 182 ಕಿಮೀ ದೂರದಲ್ಲಿ ಭೂಕಂಪನ ಸಂಭವಿಸಿದೆ. ಡಾರ್ವಿನ್‌ನಲ್ಲಿ ಸುಮಾರು 900 ಕಿಮೀ ದೂರದವರೆಗೆ ಕಂಪನದ ಅನುಭವವಾಗಿದೆ.

A 6.0 magnitude earthquake Indonesia
A 6.0 magnitude earthquake Indonesia
author img

By

Published : Feb 2, 2022, 7:47 AM IST

ಜಕಾರ್ತ(ಇಂಡೋನೇಷ್ಯಾ): ಇಂಡೋನೇಷ್ಯಾದ ಬಂದಾ ಸಮುದ್ರದ ಬಳಿ 130 ಕಿಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ 6 ರಷ್ಟು ತೀವ್ರತೆಯ ಭೂಕಂಪನವಾಗಿದೆ ಎಂದು ಆಸ್ತ್ರೇಲಿಯಾ ಭೂಗರ್ಭಶಾಸ್ತ್ರ ಇಲಾಖೆ ಮಾಹಿತಿ ನೀಡಿದೆ.

ಸಮುದ್ರದಾಳದಲ್ಲಿ ಸಂಭವಿಸಿರುವ ಈ ಭೂಕಂಪನದಿಂದ ಭಾರಿ ಅಲೆಗಳು ಸೃಷ್ಟಿಯಾಗಿದ್ದವು. ಇಲ್ಲಿನ ಪೂರ್ವ ಟಿಮೋರ್‌ನ ಈಶಾನ್ಯಕ್ಕೆ 182 ಕಿಮೀ ದೂರದಲ್ಲಿ ಈ ಕಂಪನ ಸಂಭವಿಸಿದೆ. ಡಾರ್ವಿನ್‌ನಲ್ಲಿ ಸುಮಾರು 900 ಕಿಮೀ ದೂರದವರೆಗೆ ಕಂಪನದ ಅನುಭವವಾಗಿದೆ.

ಈ ನಡುವೆ ಈ ಬಗ್ಗೆ ಮಾಹಿತಿ ನೀಡಿರುವ ಆಸ್ಟ್ರೇಲಿಯಾ ಹವಾಮಾನ ಇಲಾಖೆ, ದೇಶಕ್ಕೆ ಯಾವುದೇ ಸುನಾಮಿ ಭೀತಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ಕಂಪನದಿಂದ ಇದುವರೆಗೂ ಸಾವು ನೋವಿನ ವರದಿಯಾಗಿಲ್ಲ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈ ಭಾಗದಲ್ಲಿ ಆಗಾಗ ಭೂ ಕಂಪನ ಸಂಭವಿಸುತ್ತಲೇ ಇರುತ್ತದೆ. ಕಳೆದ ವರ್ಷದ ಅಂತ್ಯದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇತ್ತೀಚೆಗೆ 4.7 ತೀವ್ರತೆಯ ಭೂಕಂಪವು ಪಶ್ಚಿಮ ಆಸ್ಟ್ರೇಲಿಯನ್ ವೀಟ್‌ಬೆಲ್ಟ್ ನಲ್ಲಿ ಸಂಭವಿಸಿತ್ತು.

ಇದನ್ನು ಓದಿ:ಹಾಟ್​ ವಿಡಿಯೋ ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಬಾಲಿವುಡ್​ ನಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.