ತೈಪೆ (ತೈವಾನ್) : ಚೀನಾದ ಏಳು ಯುದ್ಧ ವಿಮಾನಗಳು ಮತ್ತು ಅಮೆರಿಕದ ಕೆಲವು ಗಸ್ತು ವಿಮಾನಗಳು ತೈವಾನ್‌ನ ವಾಯು ರಕ್ಷಣಾ ವಲಯಕ್ಕೆ ಪ್ರವೇಶಿಸಿವೆ ಎಂದು ತೈವಾನ್‌ನ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.
ಐದು ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್‌ಎ) ವೈ-8 ವಿಮಾನ, ಎರಡು ಜೆ-10 ಫೈಟರ್ ಜೆಟ್‌ಗಳು ಮತ್ತು ಎರಡು ಜೆ-11 ಬಾಂಬರ್‌ಗಳು ದಕ್ಷಿಣ ಚೀನಾದ ಸಮುದ್ರದಲ್ಲಿನ ತೈವಾನ್ ನಿಯಂತ್ರಣದಲ್ಲಿನ ಪ್ರತಾಸ್ ದ್ವೀಪಗಳ ಬಳಿ ಕಂಡು ಬಂದಿವೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆಯನ್ನು ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ಉಲ್ಲೇಖಿಸಿದೆ.
ಹಲವಾರು ತಿಂಗಳುಗಳ ನಂತರ ಅಮೆರಿಕ ಮಿಲಿಟರಿ ವಿಮಾನ ತಮ್ಮ ರಕ್ಷಣಾ ವಲಯಕ್ಕೆ ಭೇಟಿ ನೀಡಿದೆ ಎಂದು ತೈವಾನ್ ಉಲ್ಲೇಖಿಸಿದೆ. ಒಂದು ರಾಷ್ಟ್ರದ ವಾಯುಗಡಿ ಪ್ರವೇಶಿಸಬೇಕಾದ್ರೆ ಆ ರಾಷ್ಟ್ರದ ಅನುಮತಿ ಪಡೆಯಬೇಕಾಗುತ್ತದೆ. ಆದರೆ, ಯಾವುದೇ ಅನುಮತಿ ಪಡೆದಿಲ್ಲ ಎಂಬುದು ತೈವಾನ್ ಸ್ಪಷ್ಟನೆಯಾಗಿದೆ.
ಇದನ್ನೂ ಓದಿ: ಕೋವಿಡ್ ಸಂಕಷ್ಟದಲ್ಲಿ ರಾಜ್ಯಗಳ ನೆರವಿಗೆ ನಿಂತ ಕೇಂದ್ರ ಸರ್ಕಾರ
ಕೆಲವು ದಿನಗಳ ಹಿಂದೆ ತೈವಾನ್ ಸ್ವಾತಂತ್ರ್ಯ ಎಂದು ಕೇಳಿದರೆ ಯುದ್ಧ ಮಾಡಬೇಕಾದೀತು ಎಂದು ಚೀನಾ ಬೆದರಿಕೆ ಹಾಕಿತ್ತು. ಇದಕ್ಕೂ ಮೊದಲು ಚೀನಾದ ತೈವಾನ್ ಪ್ರದೇಶಗಳ ಮೇಲೆ ತನ್ನ ನಿಯಂತ್ರಣ ಸಾಧಿಸಲು ಸಾಕಷ್ಟು ಪ್ರಯತ್ನಿಸಿತ್ತು.
ತೈವಾನ್ ಮೇಲೆ ಚೀನಾದ ಒತ್ತಡ ಮುಂದುವರೆದಂತೆ ಅಮೆರಿಕ ಕೂಡ ಕಳವಳ ವ್ಯಕ್ತಪಡಿಸಿತ್ತು. ಚೀನಾದ ಇಂಥ ಪ್ರಯತ್ನ ಶಾಂತಿ ಕದಡುವಂತೆ ಮಾಡುತ್ತದೆ ಎಂದು ಅಮೆರಿಕ ಅಸಮಾಧಾನ ವ್ಯಕ್ತಪಡಿಸಿತ್ತು.
ಎರಡೂ ರಾಷ್ಟ್ರಗಳ ಮಧ್ಯೆ ಸಂಧಾನ ಮಾಡಲು ಕೂಡ ಅಮೆರಿಕ ಮುಂದಾಗಿದೆ. ಉಭಯ ದೇಶಗಳ ನಡುವಿನ ವಿವಾದ ಶಾಂತಿಯುತವಾಗಿ ಬಗೆಹರಿಸಲು ಅಮೆರಿಕ ಬದ್ಧವಾಗಿದೆ ಎಂದು ಹೇಳಿತ್ತು. ಈಗ ಮತ್ತೆ ಚೀನಾ ಸೇನೆಯ ಯುದ್ಧ ವಿಮಾನಗಳು ತೈವಾನ್ ವಾಯು ರಕ್ಷಣಾ ಗಡಿ ದಾಟಿರುವುದು ಮತ್ತಷ್ಟು ಆತಂಕ ಹೆಚ್ಚಿಸಿದೆ.