ಟೋಕಿಯೊ: ಜಪಾನ್ನಲ್ಲಿ 6.3 ತೀವ್ರತೆಯ ಭೂಕಂಪನ ಸಂಭವಿಸಿದೆ. ಜಪಾನ್ನ ಹವಾಮಾನ ಸಂಸ್ಥೆ (ಜೆಎಂಎ)ಈ ವಿಷಯ ಬಹಿರಂಗ ಪಡಿಸಿದ್ದು, ಟೋಕಿಯೊ ಪ್ರಿಫೆಕ್ಚರ್‌ನ ಒಗಸವಾರ ದ್ವೀಪಗಳಲ್ಲಿ ಈ ಭೂಕಂಪನವಾಗಿದೆ ಎಂದು ತಿಳಿದು ಬಂದಿದೆ.
ಬೆಳಗ್ಗೆ 6:09 ಗಂಟೆಗೆ ಈ ಕಂಪನವಾಗಿದೆ ಎಂದು ಹವಾಮಾನ ಸಂಭವಿಸಿದೆ. ಅದರ ಕೇಂದ್ರ ಬಿಂದು 27.1 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 142.5 ಡಿಗ್ರಿ ಪೂರ್ವ ರೇಖಾಂಶದಲ್ಲಿ ಮತ್ತು 70 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಜೆಎಂಎ ಮಾಹಿತಿ ನೀಡಿದೆ.
ಈ ಭೂಕಂಪನದಿಂದ ಯಾವುದೇ ಸುನಾಮಿ ಮುನ್ನೆಚ್ಚರಿಕೆಯನ್ನು ನೀಡಲಾಗಿಲ್ಲ.
ಇದನ್ನೂ ಓದಿಒಮಿಕ್ರಾನ್ ಭೀತಿ: ಜನವರಿ 8ರಿಂದ 16ರವರೆಗೆ ಶಾಲೆಗಳಿಗೆ ರಜೆ ಘೋಷಿಸಿದ ಕೆಸಿಆರ್