ETV Bharat / international

ನ್ಯೂಜಿಲ್ಯಾಂಡ್​ನಲ್ಲಿ ಪ್ರಬಲ ಭೂಕಂಪ: ಒಂದೇ ವಾರದಲ್ಲಿ 3 ಬಾರಿ ಕಂಪಿಸಿದ ಭೂಮಿ - ನ್ಯೂಜಿಲ್ಯಾಂಡ್​ ಭೂಕಂಪ

ಗುರುವಾರವಷ್ಟೇ 7.3 ಹಾಗೂ 8.1 ತೀವ್ರತೆಯ ಭೂಕಂಪಕ್ಕೆ ಸಾಕ್ಷಿಯಾಗಿದ್ದ ನ್ಯೂಜಿಲ್ಯಾಂಡ್​ನಲ್ಲಿ ಇಂದು ಮತ್ತೆ ಭೂಮಿ ಕಂಪಿಸಿದೆ.

6.3 magnitude earthquake registered off New Zealand
ನ್ಯೂಜಿಲ್ಯಾಂಡ್​ನಲ್ಲಿ ಮತ್ತೆ ಪ್ರಬಲ ಭೂಕಂಪ
author img

By

Published : Mar 6, 2021, 1:35 PM IST

ಆಕ್ಲೆಂಡ್ (ನ್ಯೂಜಿಲೆಂಡ್): ನ್ಯೂಜಿಲ್ಯಾಂಡ್​ನಲ್ಲಿ ಇಂದು ಮತ್ತೆ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 6.3ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ವರದಿ ಮಾಡಿದೆ.

ಗಿಸ್ಬೋರ್ನ್ ನಗರದ ಈಶಾನ್ಯಕ್ಕೆ 9 ಕಿ.ಮೀ ದೂರ ಹಾಗೂ 181 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಕಳೆದೊಂದು ವಾರದಿಂದ ದೇಶದಲ್ಲಿ ಒಟ್ಟು ಮೂರು ಬಾರಿ ಭೂಮಿ ಕಂಪಿಸಿದೆ. ಗುರುವಾರ 7.3 ಹಾಗೂ 8.1 ತೀವ್ರತೆಯ ಭೂಕಂಪಕ್ಕೆ ನ್ಯೂಜಿಲ್ಯಾಂಡ್ ಸಾಕ್ಷಿಯಾಗಿತ್ತು.

ಇದನ್ನೂ ಓದಿ: ಇಮ್ರಾನ್​ ಖಾನ್​ಗೆ ಅಗ್ನಿಪರೀಕ್ಷೆ: ಇಂದು ವಿಶ್ವಾಸ ಮತ ಯಾಚಿಸಲಿರುವ ಪಾಕ್​ ಪ್ರಧಾನಿ

ಈ ಮೂರೂ ಸಂದರ್ಭಗಳಲ್ಲೂ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ. ಉತ್ತರ ದ್ವೀಪದ ಪೂರ್ವ ಕರಾವಳಿಯ ಜನರಿಗೆ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಿದ್ದು, ಸುನಾಮಿ ಎಚ್ಚರಿಕೆ ಘೋಷಿಸುವ ಸಾಧ್ಯತೆಯಿದೆ.

2011ರಲ್ಲಿ ನ್ಯೂಜಿಲೆಂಡ್​ನ ಕ್ರಿಸ್ಟ್​ಚರ್ಚ್ ನಗರದಲ್ಲಿ ಉಂಟಾಗಿದ್ದ 6.3 ತೀವ್ರತೆಯ ಭೂಕಂಪದಿಂದಾಗಿ ಸುಮಾರು 185 ಮಂದಿ ಮೃತಪಟ್ಟಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.