ಗಿಲ್ಗಿಟ್ ಬಾಲ್ಟಿಸ್ತಾನ್ (ಪಿಒಕೆ) : ಪಾಕಿಸ್ತಾನ ಆಕ್ರಮಿತ ಗಿಲ್ಗಿಟ್ ಬಾಲ್ಟಿಸ್ತಾನದ ಮಿನಿಮಾರ್ಗ್ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನವಾಗಿದ್ದು, ಇಬ್ಬರು ಪೈಲಟ್‌ಗಳು ಸೇರಿದಂತೆ ಕನಿಷ್ಠ ನಾಲ್ವರು ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ.
ಪಾಕಿಸ್ತಾನ ಸೇನೆಯ ಹೇಳಿಕೆಯ ಪ್ರಕಾರ, ಗಿಲ್ಗಿಟ್ ಬಾಲ್ಟಿಸ್ತಾನದ ಮಿನಿಮಾರ್ಗ್ ಪ್ರದೇಶದಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಓದಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಲು ಸೈನ್ಯದ ಬೆಂಬಲ ಬೇಕಿಲ್ಲ : ಮರಿಯಮ್ ನವಾಜ್
ಅಪಘಾತದಲ್ಲಿ ಮೇಜರ್ ಎಂ. ಹುಸೇನ್ ಮತ್ತು ಸಹ ಪೈಲಟ್ ಮೇಜರ್ ಅಯಾಜ್ ಹುಸೇನ್, ನಾಯಕ್ ಇಂಜಿಮಾಮ್ ಆಲಂ ಮತ್ತು ಸೈನಿಕ ಮುಹಮ್ಮದ್ ಫಾರೂಕ್ ಸಾವನ್ನಪ್ಪಿದ್ದಾರೆ ಎಂದು ಸೇನೆಯು ಖಚಿತಪಡಿಸಿದೆ.
ಸಿಪಾಯಿ ಅಬ್ದುಲ್ ಖದೀರ್ ಎಂಬ ಸೈನಿಕನ ಮೃತದೇಹವನ್ನು ಸ್ಕರ್ದುನಲ್ಲಿರುವ ಸಂಯೋಜಿತ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸುತ್ತಿದ್ದಾಗ ಅಪಘಾತಕ್ಕೀಡಾಗಿದೆ.