ಕಾಬೂಲ್ (ಅಫ್ಘಾನಿಸ್ತಾನ): ಮಾರ್ಚ್ 2 ರಂದು ಕಂದಹಾರ್ ಪ್ರಾಂತ್ಯದಲ್ಲಿ ಅಫ್ಘಾನ್ ಭದ್ರತಾ ಪಡೆಗಳು 20 ತಾಲಿಬಾನ್ ಭಯೋತ್ಪಾದಕರನ್ನು ಸದೆಬಡೆದಿವೆ.
ಕಂದಹಾರ್ ಪ್ರಾಂತ್ಯದ ಅರ್ಘಂಡಾಬ್ ಜಿಲ್ಲೆಯಲ್ಲಿ ನಿನ್ನೆ 20 ತಾಲಿಬಾನ್ ಉಗ್ರರನ್ನು ಹತ್ಯೆ ಮಾಡಲಾಗಿದೆ. ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ನಾಶಪಡಿಸಲಾಗಿದೆ ಎಂದು ಅಫ್ಘಾನಿಸ್ತಾನ ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿದೆ.
ಇದಲ್ಲದೆ, ಅಫ್ಘಾನ್ ಕಮಾಂಡೋ ಪಡೆಗಳು ಮಂಗಳವಾರ 27 ಮಿಲಿಟರಿ ಸದಸ್ಯರು ಮತ್ತು ಏಳು ನಾಗರಿಕರನ್ನು ಹೆರಾತ್ ಪ್ರಾಂತ್ಯದ ತಾಲಿಬಾನ್ ಕಾರಾಗೃಹಗಳಿಂದ ಮುಕ್ತಗೊಳಿಸಿವೆ.
ಇದನ್ನೂ ಓದಿ: ಸ್ವತಃ ಆಸ್ಪತ್ರೆಗೆ ತೆರಳಿ ಕೋವಿಡ್ ಲಸಿಕೆ ತೆಗೆದುಕೊಂಡ ರಾಷ್ಟ್ರಪತಿ ರಾಮನಾಥ್ ಕೋವಿಂದ್