ETV Bharat / international

ಕಾಶ್ಮೀರ ಐಕ್ಯತಾ ರ‍್ಯಾಲಿ ಗುರಿಯಾಗಿಸಿ ಬಾಂಬ್​ ಬ್ಲಾಸ್ಟ್​: ಪಾಕ್​ನಲ್ಲಿ ಇಬ್ಬರ ಸಾವು, 28 ಮಂದಿ ಗಾಯ

author img

By

Published : Feb 6, 2021, 5:57 AM IST

ಸಿಬಿಯಲ್ಲಿ ಮೊದಲ ಬ್ಲಾಸ್ಟ್​ ಸಂಭವಿಸಿದ್ದು 24 ಮಂದಿ ಗಾಯಗೊಂಡಿದ್ದಾರೆ. ಮತ್ತೆ ಕೆಲವು ಗಂಟೆಗಳ ನಂತರ ಕ್ವೆಟ್ಟಾದಲ್ಲಿ ಮತ್ತೊಂದು ಬಾಂಬ್​ ಸಿಡಿದಿದ್ದು ಇಬ್ಬರು ಮೃತಪಟ್ಟು 4 ಮಂದಿ ಗಾಯಗೊಂಡಿದ್ದಾರೆ. ಕಾಶ್ಮೀರ್ ಡೇ ರ್ಯಾಲಿಯನ್ನು ಗುರಿಯಾಗಿಸಿಕೊಂಡು ಈ ಬಾಂಬ್​ ಬ್ಲಾಸ್ಟ್​ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕಾಶ್ಮೀರ ಐಕ್ಯತಾ ರ‍್ಯಾಲಿ ವೇಳೆ ಬಾಂಬ್​ ಬ್ಲಾಸ್ಟ್

ಕ್ವೆಟ್ಟಾ(ಪಾಕಿಸ್ತಾನ): ಬಲೂಚಿಸ್ತಾನ್​ ಪ್ರಾಂತ್ಯದ ಕ್ವೆಟ್ಟಾ ಮತ್ತು ಸಿಬಿ ನಗರಗಳದಲ್ಲಿ ಎರಡುಕಡೆ ಬಾಂಬ್​ ಬ್ಲಾಸ್ಟ್​ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟು 28ಕ್ಕೆ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಬಿಯಲ್ಲಿ ಮೊದಲ ಬ್ಲಾಸ್ಟ್​ ಸಂಭವಿಸಿದ್ದು 24 ಮಂದಿ ಗಾಯಗೊಂಡಿದ್ದಾರೆ. ಮತ್ತೆ ಕೆಲವು ಗಂಟೆಗಳ ನಂತರ ಕ್ವೆಟ್ಟಾದಲ್ಲಿ ಮತ್ತೊಂದು ಬಾಂಬ್​ ಸಿಡಿದಿದ್ದು, ಇಲ್ಲಿ ಇಬ್ಬರು ಮೃತಪಟ್ಟು 4 ಮಂದಿ ಗಾಯಗೊಂಡಿದ್ದಾರೆ. ಕಾಶ್ಮೀರ್ ಡೇ ರ್ಯಾಲಿಯನ್ನು ಗುರಿಯಾಗಿಸಿಕೊಂಡು ಈ ಬಾಂಬ್​ ಬ್ಲಾಸ್ಟ್​ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬ್ಲಾಸ್ಟ್​ನಲ್ಲಿ ಮೃತಪಟ್ಟ ಇಬ್ಬರ ಶವವನ್ನು ಕ್ವೆಟ್ಟಾದ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಾಶ್ಮೀರ ಐಕ್ಯತಾ ದಿನದ ರ್ಯಾಲಿಯನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಿರುವುದು ಸ್ಪಷ್ಟವಾಗಿದೆ ಎಂದು ಕ್ವೆಟ್ಟಾದ ಉಪ ಆಯುಕ್ತ ಮತ್ತು ನಿವೃತ್ತ ಮೇಜರ್ ಔರಂಗಜೇಬ್ ಬದಿನಿ ತಿಳಿಸಿದ್ದಾರೆ. ಅಲ್ಲದೆ ಇಲ್ಲಿಯವರೆಗೆ ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ ಎಂದು ಹೇಳಿದ್ದಾರೆ.

ಶುಕ್ರವಾರ ನಗರದಾದ್ಯಂತ ಕಾಶ್ಮೀರ ಐಕ್ಯತಾ ದಿನದ ಪ್ರಯುಕ್ತ ಸಾರ್ವಜನಿಕ ಮೆರವಣಿಗೆಗಳು ನಡೆಯುತ್ತಿದ್ದವು ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.