ಅಂಕಾರಾ : ಟರ್ಕಿಯ ಕಪ್ಪು ಸಮುದ್ರದ ಬಾರ್ಟಿನ್ ಕರಾವಳಿಯಲ್ಲಿ ಸರಕು ಸಾಗಣೆ ಹಡಗು ಮುಳುಗಿ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿಯನ್ನು ರಕ್ಷಿಸಲಾಗಿದೆ.
ಅರ್ವಿನ್ ಎಂಬ ಹೆಸರಿನ ಹಡಗು ಇದಾಗಿದ್ದು, ಜಾರ್ಜಿಯಾದಿಂದ ಬಲ್ಗೇರಿಯಾ ಕಡಗೆ ಹೋಗುತ್ತಿತ್ತು. ಹಡಗಿನಲ್ಲಿ 12 ಮಂದಿ ಸಿಬ್ಬಂದಿಯಿದ್ದರು ಎಂದು ಟರ್ಕಿಯ ಕರಾವಳಿ ಕಾವಲು ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಇಂಡೋನೇಷ್ಯಾ ಭೂಕಂಪ - ಪ್ರವಾಹ: ಮೃತರ ಸಂಖ್ಯೆ 96ಕ್ಕೆ ಏರಿಕೆ, 70 ಸಾವಿರ ಮಂದಿ ಸ್ಥಳಾಂತರ
ನಾಪತ್ತೆಯಾಗಿರುವ ಉಳಿದ ನಾಲ್ವರಿಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಟರ್ಕಿಯ ನೌಕಾಪಡೆ ತನ್ನ ಸಿಬ್ಬಂದಿಯನ್ನು ನಿಯೋಜಿಸಿದೆ.