ETV Bharat / international

ಕಾಬೂಲ್ : ಮಿಲಿಟರಿ ಶಿಬಿರಗಳ ಮೇಲೆ ತಾಲಿಬಾನ್​ ಉಗ್ರರ ದಾಳಿ,17 ಸೈನಿಕರು ಮೃತ..

author img

By

Published : Jun 17, 2020, 2:15 PM IST

ಉತ್ತರ ಜಾವ್ಜಾನ್ ಪ್ರಾಂತ್ಯದಲ್ಲಿನ ಆಯಕಟ್ಟಿನ ಪ್ರದೇಶ ಬಾಲಾ ಹಿಸಾರ್‌ನಲ್ಲಿ ಸೇನಾ ಶಿಬಿರಕ್ಕೆ ತಾಲಿಬಾನ್ ಉಗ್ರರು ನುಗ್ಗಿದ ನಂತರ 12 ಸೇನಾ ಸೈನಿಕರು ಮತ್ತು ಐದು ಉಗ್ರರು ಸಾವನ್ನಪ್ಪಿದ್ದಾರೆ.

17-afghan-soldiers-killed-in-taliban-attacks
ಮಿಲಿಟರಿ ಶಿಬಿರಗಳ ಮೇಲೆ ತಾಲಿಬಾನ್​ ಉಗ್ರರ ದಾಳಿ

ಕಾಬೂಲ್ : ಅಪ್ಘಾನಿಸ್ತಾನದ ಎರಡು ಉತ್ತರ ಪ್ರಾಂತ್ಯಗಳ ಮಿಲಿಟರಿ ಶಿಬಿರಗಳ ಮೇಲೆ ತಾಲಿಬಾನ್ ಉಗ್ರರು ದಾಳಿ ನಡೆಸಿದ ಪರಿಣಾಮ ಕನಿಷ್ಠ 17 ಸೈನಿಕರು ಸಾವನ್ನಪ್ಪಿದ್ದಾರೆ ಹಾಗೂ 11 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕುಂಡುಜ್ ಪ್ರಾಂತ್ಯದ ಉತ್ತರಕ್ಕೆ 15 ಕಿ.ಮೀ ದೂರದಲ್ಲಿರುವ ತಲವ್ಕಾ ಎಂಬಲ್ಲಿ ಘರ್ಷಣೆ ಸಂಭವಿಸಿದ್ದು, ಐವರು ಅಪ್ಘಾನ್ ಸೇನಾ ಸೈನಿಕರು ಸಾವನ್ನಪ್ಪಿದ್ದಾರೆ ಹಾಗೂ ಆರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

"ಸುಮಾರು ಎರಡು ಗಂಟೆಗಳ ಹೋರಾಟದ ನಂತರ ತಾಲಿಬಾನ್ ದಂಗೆಕೋರರನ್ನು ಸ್ಥಳದಿಂದ ಹಿಂತಿರುಗಿಸಲಾಯಿತು. ಅಲ್ಲದೇ ಈ ಘರ್ಷಣೆಯಲ್ಲಿ ನಾಲ್ಕು ಉಗ್ರರನ್ನು ಸಹ ಕೊಲ್ಲಲಾಯಿತು" ಎಂದು ಸೈನ್ಯದ ಮುಖ್ಯಸ್ಥ ಅಬ್ದುಲ್ ಖಾದಿರ್ ತಿಳಿಸಿದ್ದಾರೆ.

ಅದೇ ರೀತಿ ಉತ್ತರ ಜಾವ್ಜಾನ್ ಪ್ರಾಂತ್ಯದಲ್ಲಿನ ಆಯಕಟ್ಟಿನ ಪ್ರದೇಶ ಬಾಲಾ ಹಿಸಾರ್‌ನಲ್ಲಿ ಸೇನಾ ಶಿಬಿರಕ್ಕೆ ತಾಲಿಬಾನ್ ಉಗ್ರರು ನುಗ್ಗಿದ ನಂತರ 12 ಸೇನಾ ಸೈನಿಕರು ಮತ್ತು ಐದು ಉಗ್ರರು ಸಾವನ್ನಪ್ಪಿದ್ದಾರೆ. ಹಾಗೂ ಐದು ಸೇನಾ ಸಿಬ್ಬಂದಿ ಮತ್ತು 10 ಉಗ್ರರು ಗಾಯಗೊಂಡಿದ್ದಾರೆ ಎಂದು ಸರ್ಕಾರದ ವಕ್ತಾರರು ಖಚಿತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.