ETV Bharat / international

ಹೊತ್ತಿ ಉರಿದ ತೇಜ್​ಗಾಂ ಎಕ್ಸ್​ಪ್ರೆಸ್ ರೈಲು​: 65 ಜನ ಸಜೀವ ದಹನದ ಮನಕಲಕುವ ವಿಡಿಯೋ - Tezgam express

ಕರಾಚಿ- ರಾವಲ್ಪಿಂಡಿ ತೇಜ್​​ಗಾಂ ಎಕ್ಸ್​​ಪ್ರೆಸ್​​ ರೈಲಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಪರಿಣಾಮ 65 ಜನ ಸಾವನ್ನಪ್ಪಿದ್ದು, 13 ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಒಟ್ಟು ಮೂರು ಬೋಗಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಬೆಂಕಿಗೆ ಗ್ಯಾಸ್​ ಸಿಲಿಂಡರ್​ ಸ್ಫೋಟ ಕಾರಣವೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ತೇಜ್​ಗಾಂ
author img

By

Published : Oct 31, 2019, 10:28 AM IST

Updated : Oct 31, 2019, 1:19 PM IST

ಲಿಖತ್​ಪುರ್​: ಪಾಕಿಸ್ತಾನದ ಕರಾಚಿ- ರಾವಲ್ಪಿಂಡಿ ತೇಜ್ ಗಾಂ ಎಕ್ಸ್ ಪ್ರೆಸ್ ರೈಲು ಹೊತ್ತಿ ಹುರಿದ ಅಗ್ನಿ ಅವಘಡದಲ್ಲಿ 65 ಪ್ರಯಾಣಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಪಾಕಿಸ್ತಾನದ ಲಾಹೋರ್​ನಿಂದ ಕರಾಚಿಗೆ ತೆರಳುತ್ತಿದ್ದ ತೇಜ್​ ಗಾಂ ಎಕ್ಸ್​ಪ್ರೆಸ್​ ರೈಲು, ಲಿಯಾಖತ್​ಪುರ ಬಳಿಯ ರಹಿಮ್​ ಯಾರ್​ ಖಾನ್​​​ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ 65 ಜನರು ಸಜೀವದಹನವಾಗಿದ್ದಾರೆ. ಇನ್ನು 13ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ಯಾಸ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಹೊತ್ತಿ ಉರಿದ ತೇಜ್​ಗಾಂ ಎಕ್ಸ್​ಪ್ರೆಸ್

ಲಿಯಾಖತ್​ಪುರಕ್ಕೆ ತಲುಪುತ್ತಿರುವ ವೇಳೆ ಮೂರು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದು ಉಳಿದ ಬೋಗಿಗಳಿಗೂ ಆವರಿಸತೊಡಿಗಿದ್ದು, ಒಟ್ಟು ಮೂರು ಬೋಗಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಅವುಗಳಲ್ಲಿ ಸುಮಾರು 200 ಜನರು ಪ್ರಯಾಣಿಸುತ್ತಿದ್ದರು. ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಪಾಕಿಸ್ತಾನ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಯಾಣಿಕರು ಸಾಗಿಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಎಂಧು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

Intro:Body:

ಎಕ್ಸ್​​​ಪ್ರೆಸ್​​​ ಟ್ರೈನ್​​ನಲ್ಲಿ ಬೆಂಕಿ: 16 ಸಾವು, 13 ಜನರಿಗೆ ಗಾಯ 

ಲಿಯಾಕತ್​ಪುರ( ಪಾಕಿಸ್ತಾನ) :ಇಲ್ಲಿನ ಎಕ್ಸ್​​ಪ್ರೆಸ್​ ಟ್ರೈನ್​ವೊಂದರಲ್ಲಿ ಬೆಂಕಿಹೊತ್ತಿಕೊಂಡು ಆವರಿಸಿದ ಪರಿಣಾಮ 16 ಜನ ಸಾವನ್ನಪ್ಪಿದ್ದು, 13 ಜನ ತೀವ್ರವಾಗಿ ಗಾಯಗೊಂಡಿದ್ದಾರೆ.   ಲಿಯಾಕತ್​ಪುರ ಬಳಿಯ ರಹಿಮ್​ ಯಾರ್​ ಖಾನ್​​​ ಪ್ರದೇಶದಲ್ಲಿ ಈ ಘಟನೆ ನಡೆದಿದೆ.  

ಕರಾಚಿ- ರಾವಲ್ಪಿಂಡಿ ತೇಜ್​​ಗಾಂ ಎಕ್ಸ್​​ಪ್ರೆಸ್​​ ರೈಲಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ರೈಲು ಲಾಹೋರ್​ನಿಂದ ಕರಾಚಿಗೆ ತೆರಳುತ್ತಿತ್ತು ಎನ್ನಲಾಗಿದೆ.    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.  ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. 

Conclusion:
Last Updated : Oct 31, 2019, 1:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.